ವಿವಿಧ ಬೇಡಿಕೆ ಈರೀಡಿಸಲು ಪಟ್ಟು

ಆಶಾ ಕಾರ್ಯಕರ್ತೆಯರಿಗೆ ವಹಿಸಿರುವ ಡಿಜಿಟಲ್ ಕೆಲಸಕ್ಕೆ ತಕ್ಕಂತೆ ಮೊಬೈಲ್ ವಿತರಣೆ ಮಾಡಬೇಕು, ಸರ್ಕಾರಿ ನೌಕರರು ಎಂದು ಸರ್ಕಾರ ಪರಿಗಣಿಸಬೇಕು ಎಂದು ಒತ್ತಾಯಿಸಿ, ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
asha protest
ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.folder
Published on: 

ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ವಹಿಸಿರುವ ಡಿಜಿಟಲ್ ಕೆಲಸಕ್ಕೆ ತಕ್ಕಂತೆ ಮೊಬೈಲ್ ವಿತರಣೆ ಮಾಡಬೇಕು, ಸರ್ಕಾರಿ ನೌಕರರು ಎಂದು ಸರ್ಕಾರ ಪರಿಗಣಿಸಬೇಕು ಎಂದು ಒತ್ತಾಯಿಸಿ, ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

ಜಿಬಿಎ ಜಿಲ್ಲಾಧ್ಯಕ್ಷೆ ಟಿ.ಸಿ.ರಮಾ ಮಾತನಾಡಿ, ಆಶಾ ಕಾರ್ಯಕರ್ತೆಯರು ಡಿಜಿಟಲ್ ಕೆಲಸ ಮಾಡುವುದನ್ನು ಇಲಾಖೆಯೂ ಕಡ್ಡಾಯಗೊಳಿಸಿದ್ದು, ಮೊಬೈಲ್ ನೀಡದೆ ಇರುವುದು ಪ್ರಗತಿ ಸಾಧನೆಗೆ ಅಡ್ಡಿಯಾಗುತ್ತಿದೆ. ಟ್ಯಾಬ್ ಅಥವಾ ಗುಣಮಟ್ಟದ ಮೊಬೈಲ್ ನೀಡಿದಾಗ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯ ಎಂದು ಹೇಳಿದರು.

ಕಾರ್ಯಕರ್ತರ ಮೊಬೈಲ್‌ಗೆ 280 ರೂ. ನೀಡಲಾಗುತ್ತಿದ್ದನ್ನು ಸಹ ನಿಲ್ಲಿಸಲಾಗಿದೆ. ಸಮಸ್ತ ಆ್ಯಪ್‌ನಲ್ಲಿ ಡಾಟಾ ತುಂಬುವುದಕ್ಕೆ ಪ್ರೋತ್ಸಾಹ ಧನ ನಿಗಧಿ ಮಾಡಬೇಕು. ಕೆಲ ಕಾರ್ಯಕರ್ತೆಯರ ಬಳಿ ಸ್ಮಾರ್ಟ್ ೆನ್ ಇಲ್ಲದೆ ಇರುವುದರಿಂದ ಕುಟುಂಬದ ಸದಸ್ಯರ ಮೊಬೈಲ್ ಬಳಕೆ ಮಾಡಬೇಕಾಗುತ್ತಿದೆ. ಇದರಿಂದ ಗೌಪ್ಯತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆಶಾ ಕಾರ್ಯಕರ್ತೆಯರಿಗೆ ಈಗಿರುವ ಪ್ರೋತ್ಸಾಧನ ಮತ್ತು ಗೌರವಧನ ಸೇರಿ ಮಾಸಿಕ ಗೌರವಧನ ನೀಡಬೇಕು. ಎನ್‌ಎಚ್‌ಎಂ ಮಾರ್ಗಸೂಚಿ ಪ್ರಕಾರ ನಿಕ್ಷಯ್ ಆ್ಯಪ್ ಕೆಲಸ ಮಾಡುವಂತೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು. ಬಾಕಿ ಇರುವ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕರ್ತವ್ಯದ ಸಮಯದ ಜಿಪಿಎಸ್ ವರದಿ ಹಾಕಬೇಕು ಎಂಬ ನಿಯಮ ತೆಗೆಯಬೇಕು. 10 ವರ್ಷ ಸೇವೆ ಸಲ್ಲಿಸಿ ಕೆಲಸ ಬಿಟ್ಟಿರುವ ಅಥವಾ ನಿವೃತ್ತಿಯಾಗಿರುವ ಕಾರ್ಯಕರ್ತೆಯರಿಗೆ ನಿಯಮಾನುಸಾರ ಇಡಗಂಟು ನೀಡಬೇಕು. ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕ್ರಮವಹಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.

ಸಂಘದ ಕಾರ್ಯದರ್ಶಿ ಫರನಾ, ಉಪಾಧ್ಯಕ್ಷರಾದ ಮಮತ, ಸುಮಿತ್ರಾ, ಶೋಭಾ, ನಗರ ಕಾರ್ಯದರ್ಶಿ ಶಶಿಕಲಾ, ಬೆಂ.ಗ್ರಾ ಜಿಲ್ಲೆ ಉಪಾಧ್ಯಕ್ಷೆ ಆಶಾ, ಪವಿತ್ರಾ, ಅಮರಮ್ಮ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net