ಕಮಿಷನ್ ಹಣ ಬಿಡುಗಡೆಗೆ ಒತ್ತಾಯ

5 NRD-4 MANAVI
Published on

ನರಗುಂದ: ಸರ್ವರ್ ಸಮಸ್ಯೆ ಬಗೆಹರಿಸಿ ಪಡಿತರ ವಿತರಕರ ಕಮಿಷನ್ ಹಾಗೂ ಇ-ಕೆವೈಸಿ ಹಣ ತಕ್ಷಣವೇ ಬಿಡುಗಡೆಗೊಳಿಸಬೇಕು ಎಂದು ನರಗುಂದ ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಸದಸ್ಯರು ಸೋಮವಾರ ತಹಸೀಲ್ದಾರ್ ಶ್ರೀಶೈಲ ತಳವಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಜಿ.ವಿ. ಹೊಸಕೇರಿ ಮಾತನಾಡಿ, ನರಗುಂದ ತಾಲೂಕಿನ ಪಡಿತರ ವಿತರಕರಿಗೆ ಕಳೆದ 5 ತಿಂಗಳಿನಿಂದ ಕಮಿಷನ್ ಹಣ ಬಂದಿಲ್ಲ. ಇದರಿಂದ ಕುಟುಂಬ ನಿರ್ವಹಣೆ, ಪಡಿತರ ವಿತರಣೆ ಮಾಡುವ ಸಹಾಯಕರು, ಪಡಿತರ ವಿತರಣೆ ಕೇಂದ್ರಗಳ ಬಾಡಿಗೆ, ಹಮಾಲರ ಕೂಲಿ ಹಣ ಕೊಡದಂತಹ ಪರಿಸ್ಥಿತಿ ನಿರ್ವಣವಾಗಿ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ಪ್ರತಿ ಕ್ವಿಂಟಾಲ್ ಅಕ್ಕಿಗೆ ಫೆಬ್ರವರಿಯಿಂದ ಮಾರ್ಚ್​ವರೆಗೆ 124 ರೂಪಾಯಿ, ಏಪ್ರಿಲ್​ನಿಂದ ಜುಲೈವರೆಗೆ 150 ರೂಪಾಯಿಗಳತೆ ಸರ್ಕಾರದಿಂದ ನಿಗದಿಪಡಿಸಿದ ಕಮಿಷನ್ ಹಾಗೂ ಇ-ಕೆವೈಸಿ ಹಣವನ್ನು ನಿಗದಿತ ಅವಧಿಯೊಳಗಾಗಿ ಪಾವತಿಸಬೇಕು. ಅಲ್ಲದೆ, ಪಡಿತರ ವಿತರಣೆಗೆ ಉಂಟಾಗಿರುವ ನ್ಯಾಯಬೆಲೆ ಅಂಗಡಿಗಳ ಸರ್ವರ್ ಸಮಸ್ಯೆ ಸರಿಪಡಿಸಿಕೊಡಬೇಕು ಎಂದು ಮನವಿ ಮಾಡಿದರು.

ಎಂ.ಬಿ. ಹಿರೇಮಠ, ಬಿ.ಎಫ್. ಖಾನಪ್ಪಗೌಡ್ರ, ಸಂಜು ಭೋಸಲೆ, ಕೆ.ಎನ್. ತಿಪ್ಪನಗೌಡ್ರ, ಎಸ್.ಎ. ಜಕಾತಿ, ಸಂಜು ಸೂಳಿಭಾವಿ, ನಿರ್ಮಲಾ ಬಾಳಿಕಾಯಿ, ದೇವಪ್ಪ ಈಟಿ, ಶಿವು ಸುಣಗಾರ, ಮಲ್ಲಿಕಾರ್ಜುನ ಭೂಮಣ್ಣವರ, ನರಗುಂದ ತಾಲೂಕು ಆಹಾರ ನಿರೀಕ್ಷಕ ಅನಿಲ ಪವಾರ, ಸಂಜು ದೊಡಮನಿ, ಎಂ.ಎಸ್.ಯಾವಗಲ್ಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net