ತಾತ್ಕಾಲಿಕ ರಸ್ತೆ ದುರಸ್ತಿಗೆ ಒತ್ತಾಯ

10 ckm 3
ಹದಗೆಟ್ಟಿರುವ ರಸ್ತೆ ದುರಸ್ತಿಗೊಲಿಸಬೇಕು ಎಂದು ಒತ್ತಾಯಿಸಿ ಕೋಟೆ ನಿವಾಸಿಗಳು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್‌ಗೆ ಮನವಿ ಸಲ್ಲಿಸಿದರು. ಜೀವನ್ ರಂಗನಾಥ್, ನಟರಾಜ್, ರಾಘವೇಂದ್ರ, ಶ್ಯಾಮು, ಪುನೀತ್, ಕುಮಾರ್, ಪವಾನಿ, ಸಿದ್ದಾರ್ಥ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಕೆಸರುಮಯವಾದ ಕೋಟೆ ಸಮೀಪದ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕು ಬೇಕು ಎಂದು ಆಗ್ರಹಿಸಿ ಬಿಜೆಪಿ ನಗರ ಯುವಮೋರ್ಚಾ ಕಾರ್ಯಕರ್ತರು ಹಾಗೂ ಸಾರ್ವಜನಿಕರು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್‌ಗೆ ಮನವಿ ಸಲ್ಲಿಸಿದರು.
ಬಿಜೆಪಿ ನಗರ ಯುವಮೋರ್ಚಾ ಅಧ್ಯಕ್ಷ ಜೀವನ್ ರಂಗನಾಥ್ ಮಾತನಾಡಿ, ಮಳೆಯಿಂದಾಗಿ ಕೋಟೆ ಸಮೀಪದ ವಾಟರ್‌ಟ್ಯಾಂಕ್ ಹತ್ತಿರದ ರಸ್ತೆಯು ಕೆಸರುಮಯವಾಗಿ ಶಾಲಾ ಮಕ್ಕಳು, ವೃದ್ಧರು ಸಂಚರಿಸದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ವಾಟರ್‌ಟ್ಯಾಂಕ್ ಹತ್ತಿರ ಚಿಕ್ಕಮಗಳೂರು-ಸಕಲೇಶಪುರ ಮಾರ್ಗವಾಗಿ ನಿರ್ಮಿಸುತ್ತಿರುವ ರೈಲ್ವೆ ಕಾಮಗಾರಿಗಾಗಿ ರಸ್ತೆಯನ್ನು ಸಂಪೂರ್ಣವಾಗಿ ಅಗೆದಿರುವುದರಿಂದ ರಸ್ತೆಯು ಕೆಸರುಮಯವಾಗಿದೆ. ಈ ಮಾರ್ಗದಲ್ಲಿ ಸುಮಾರು 250ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಇದೇ ಮಾರ್ಗವಾಗಿ ಸಂಚರಿಸಬೇಕಾಗಿದೆ. ಮಕ್ಕಳು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ಜೀವಭಯದಲ್ಲಿ ಸಂಚರಿಸುವಂತಾಗಿದೆ ಎಂದರು.
ಕೂಡಲೇ ನಗರಸಭೆ ಆಯುಕ್ತರು ಈ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಅವಘಡಗಳು ಸಂಭವಿಸಿದರೆ ತಾವೇ ಹೊಣೆಯಾಗಬೇಕು ಎಂದು ತಿಳಿಸಿದರು.
ಕೋಟೆ ನಿವಾಸಿಗಳಾದ ಕೋಟೆ ಗ್ರಾಮಸ್ಥರ ನಟರಾಜ್, ರಾಘವೇಂದ್ರ, ಶ್ಯಾಮು, ಪುನೀತ್, ಕುಮಾರ್, ಪವಾನಿ, ಸಿದ್ದಾರ್ಥ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net