ಕನ್ನಡ ಸಾಹಿತ್ಯ ಪರಿಷತ್‌ಗೆ ನಿವೇಶನ ಕಲ್ಪಿಸಿ

manavi
ಕನ್ನಡ ಸಾಹಿತ್ಯ ಪರಿಷತ್‌ಗೆ ನಿವೇಶನ ಕಲ್ಪಿಸುವಂತೆ ಒತ್ತಾಯಿಸಿ ನೆಲಮಂಗಲ ಸದಾಶಿವನಗರದ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಕಸಾಪ ಪದಾಧಿಕಾರಿಗಳು ಅಧ್ಯಕ್ಷ ಎಂ.ನಾರಾಯಣ್‌ಗೌಡ ಅವರಿಗೆ ಮನವಿ ಸಲ್ಲಿಸಿದರು. ಕಸಾಪ ಅಧ್ಯಕ್ಷ ಬೈರನಹಳ್ಳಿಪ್ರಕಾಶ್‌ಮೂರ್ತಿ,ಾಹಿತಿ ಡಾ.ಚೌಡಯ್ಯ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಗೌರವ ಕಾರ್ಯದರ್ಶಿ ಸದಾನಂದಾರಾಧ್ಯ, ಭಾನುಪ್ರಕಾಶ್ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಕನ್ನಡ ಸಾಹಿತ್ಯ ಪರಿಷತ್‌ಗೆ ನಗರಸಭೆ ವ್ಯಾಪ್ತಿಯಲ್ಲಿ ನಿವೇಶನ ಕಲ್ಪಿಸುವಂತೆ ಒತ್ತಾಯಿಸಿ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ನೆ.ಯೋ.ಪ್ರಾಧಿಕಾರದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ನಗರ ಸದಾಶಿವನಗರ ನಗರ ಬಳಿ ನೆಲಮಂಗಲ ಯೋಜನಾ ಪ್ರಾಧಿಕಾರ ಕಚೇರಿ ಬಳಿ ಸಮಾವೇಶಗೊಂಡ ಕನ್ನಡ ಸಾಹಿತ್ಯ ಪರಿಷತ್‌ನ ಹತ್ತಾರು ಪದಾಧಿಕಾರಿಗಳು, ನಗರಸಭೆ ವ್ಯಾಪ್ತಿಯಲ್ಲಿ ಬಡಾವಣೆಯಲ್ಲಿನ ಮೀಸಲು ಪ್ರದೇಶ (ಸಿಎ.ಜಾಗ)ವನ್ನು ಕನ್ನಡ ಸಾಹಿತ್ಯ ಪರಿಷತ್‌ಗೆ ನೀಡುವಂತೆ ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್‌ಗೌಡ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಬೈರನಹಳ್ಳಿ ಪ್ರಕಾಶ್‌ಮೂರ್ತಿ ಮಾತನಾಡಿ, 1915ರಲ್ಲಿ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ್‌ಒಡೆಯರ್ ಅವರು ಪರಿಷತ್ ಸ್ಥಾಪನೆ ಮಾಡಿದ್ದು, ಕನ್ನಡ ನಾಡು, ನುಡಿ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದೆ. ಸರ್ಕಾರದ ಅಂಗ ಸಂಸ್ಥೆಯಾಗಿ ರಾಜ್ಯ, ಜಿಲ್ಲಾ ಸೇರಿ ತಾಲೂಕು ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ನಮ್ಮ ತಾಲೂಕಿನಲ್ಲಿ 2ದಶಕದಿಂದ ವರ್ಷದಿಂದ ಸಾಹಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದು ಸ್ವಂತ ನಿವೇಶನವಿಲ್ಲ. ಆದ್ದರಿಂದ ನಗರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಬಡಾವಣೆಗಳಿದ್ದು ಅದರ ಮೀಸಲು ಪ್ರದೇಶ(ಸಿಎ ಜಾಗ) ವನ್ನು ಮಂಜೂರು ಮಾಡಿಕೊಂಡಬೇಕೆಂದು ಒತ್ತಾಯಿಸಿದರು.
ನೆ.ಯೋ.ಪ್ರಾಧಿಕಾರಿದ ಅಧಿಕಾರಿಗಳು ಸೇರಿ ಮೇಲ್ಮಟ್ಟದ ಅಧಿಕಾರಿಗಳೊಂದಿಗೆ ನಿವೇಶನ ಮಂಜೂರು ವಿಚಾರವಾಗಿ ಗಮನಕ್ಕೆ ತಂದು ಚರ್ಚಿಸಿ ಆದಷ್ಟು ಬೇಗ ನಿವೇಶನ ನೀಡುವುದಾಗಿ ಅಧ್ಯಕ್ಷ ಎಂ.ನಾರಾಯಣ್‌ಗೌಡ ಪ್ರತಿಕ್ರಿಯೆ ನೀಡಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ವಿ.ರುದ್ರೇಶ್, ಪ್ರತಿನಿಧಿ ಚಿಕ್ಕಮಾನರಹಳ್ಳಿದಿನೇಶ್, ಬೈಲೇಗೌಡ, ನಗರ ಅಧ್ಯಕ್ಷ ಮಲ್ಲೇಶ್ ಉಪಸ್ಥಿತರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net