ಸಾಲ ಮರುಪಾವತಿಸಲು ಸಮಯಾವಕಾಶ ನೀಡಲು ಒತ್ತಾಯ

10 ckm 4
ಚಿಕ್ಕಮಗಳೂರು ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿಖಿಲ್ ರಂಜನ್ ಅವರಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್ ಮುಖಂಡರು ಬ್ಯಾಂಕ್‌ನಲ್ಲಿ ಸಾಲ ಪಡೆದಿರುವ ಫಲಾನುಭವಿಗಳಿಗೆ ಮರು ಪಾವತಿಸಲು ಕಾಲಾವಕಾಶ ಹಾಗೂ ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿದರು. ಉಪ್ಪಳ್ಳಿ ಭರತ್, ಕುಸುಮಾ ಭರತ್, ಶ್ರೀಕಾಂತ್, ಅಪ್ಸರ್, ಎಚ್.ಕೆ.ಜಯಣ್ಣ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಬ್ಯಾಂಕ್‌ನಲ್ಲಿ ಸಾಲ ಪಡೆದಿರುವ ಫಲಾನುಭವಿಗಳಿಗೆ ಮರು ಪಾವತಿಸಲು ಕಾಲಾವಕಾಶ ಹಾಗೂ ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿಖಿಲ್ ರಂಜನ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ.ಭರತ್, ತಾಲೂಕಿನ ಗವನಹಳ್ಳಿ, ಮೂಡಿಗೆರೆ, ಕಳಸಾಪುರ ಹಾಗೂ ಜೋಗಣ್ಣನ ಕೆರೆ ಕೆನರಾ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ಫಲಾನುಭವಿಗಳಿಗೆ ಸಾಲ ಮರುಪಾವತಿಸಲು ಸಮಯಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ತ್ರಿಪುರ, ಬೆಟ್ಟಗೆರೆ, ನಿಡಗೋಡು, ಹಂತೂರು, ಕೊರಟೆಗೆರೆ, ಛತ್ರ ಮೈದಾನ ಮೂಡಿಗೆರೆ, ಮದಕಲ್ ಹೆಸಗಲ್, ಬಣಕಲ್, ಕೋಳೂರು, ಗವನಹಳ್ಳಿ, ರಾಂಪುರ, ಇಡೆಕಣಿ, ಹಿರೇಬೈಲು ಗ್ರಾಮಸ್ಥರು ಕೆನರಾ ಬ್ಯಾಂಕ್‌ನಲ್ಲಿ ಸಾಲ ಪಡೆದು ಸದ್ಯದ ಮಟ್ಟಿಗೆ ಅಲ್ಪಸ್ವಲ್ಪ ಮರುಪಾವತಿಸಿದ್ದಾರೆ ಎಂದರು.
ಕೊರೋನಾ ಮಹಾಮಾರಿ ಆವರಿಸಿಕೊಂಡು ಜಮೀನು, ತೋಟ ಗಳ ನಿರ್ವಹಣೆ ಇಲ್ಲದೇ ಬೆಳೆಗಾರರು ಸಂಪೂರ್ಣ ನಷ್ಟಕ್ಕೆ ತುತ್ತಾಗಿದ್ದಾರೆ. ಜೊತೆಗೆ ನಾಲ್ಕೆÊದು ವರ್ಷ ಅತಿವೃಷ್ಟಿ, ಅನಾವೃಷ್ಟಿಯಿಂದ ಸಂಪೂರ್ಣ ಬೆಳೆಗಳು ನೆಲಕಚ್ಚಿವೆ ಎಂದು ಹೇಳಿದರು.
ವಿಪರೀತ ಬೆಳೆಹಾನಿಯಿಂದ ದುಸ್ತರ ಬದುಕು ಸಾಗಿಸುತ್ತಿರುವ ಬೆಳೆಗಾರರಿಗೆ ಮಕ್ಕಳ ಶಾಲಾ ಕಾಲೇಜು ವಿದ್ಯಾಭ್ಯಾಸ ಹಾಗೂ ಕುಟುಂಬದ ನಿರ್ವಹಣೆಗೆ ತೀವ್ರ ಸಂಕಷ್ಟ ಎದುರಾಗಿದೆ. ಇನ್ನೊಂದೆಡೆ ಆರೋಗ್ಯ ಸಮಸ್ಯೆಯಿಂದ ಕುಟುಂಬ ಸದಸ್ಯರು ಬಳಲುತ್ತಿದ್ದು ಚಿಕಿತ್ಸೆಗೆ ವೆಚ್ಚ ಭರಿಸಲು ಸಾಕಷ್ಟು ಸಂಕಷ್ಟ ಎದುರಾಗಿದೆ ಎಂದು ತಿಳಿಸಿದರು.
ಹೀಗಾಗಿ ಹಲವಾರು ತೊಂದರೆಗಳಿಗೆ ಸಿಲುಕಿರುವ ಬೆಳೆಗಾರರ ಸಾಲ ಮರುಪಾವತಿಸಲು ಸಮಯಾವಕಾಶ ಹಾಗೂ ಸಾಲದಲ್ಲಿ ರಿಯಾಯಿತಿ ದೊರಕಿದರೆ ಬಹಳಷ್ಟು ಉಪಯೋಗವಾಗಲಿದೆ. ಬ್ಯಾಂಕ್ ಮುಖ್ಯಸ್ಥರು ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕುಸುಮ ಭರತ್, ಶ್ರೀಕಾಂತ್, ಅಪ್ಸರ್, ಎಚ್.ಕೆ.ಜಯಣ್ಣ, ಹಿರೇಮಗಳೂರು ರಾಘು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net