ಡ್ರೋನ್‌ನಿಂದ ಕೀಟನಾಶಕ ಸಿಂಪಡಣೆ

Insecticide spraying by drone
ಕಲಾದಗಿಯಲ್ಲಿ ಪ್ರಗತಿಪರ ರೈತ ಎಂ.ಎಸ್. ಶೆಟ್ಟರ್ ಅವರ ಜಮೀನಲ್ಲಿದ್ದ ತೊಗರಿ ಬೆಳೆಗೆ ಡ್ರೋನ್ ಮೂಲಕ ಕೀಟನಾಶಕ ಸಿಂಪಡಿಸಲಾಯಿತು.
Published on

ಕಲಾದಗಿ: ಆಧುನಿಕ ವಿಜ್ಞಾನದ ಪರಿಕರಗಳ ಮೂಲಕ ಕೃಷಿ ಮಾಡುವುದು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗುತ್ತಿದ್ದು, ಅದರ ಪ್ರಮುಖ ಪ್ರಯೋಗಗಳಲ್ಲಿ ಒಂದಾದ ಡ್ರೋನ್‌ನಿಂದ ಕ್ರಿಮಿನಾಶಕ ಸಿಂಪಡಿಸುವುದು ಹಾಗೂ ನ್ಯಾನೋ ಗೊಬ್ಬರ ಹಾಕುವುದು ಗ್ರಾಮ ವ್ಯಾಪ್ತಿಯಲ್ಲಿ ನಡೆಯುತ್ತಿದೆ.

ವಾರದ ಹಿಂದೆ ಕೃಷಿ ಇಲಾಖೆ ಇಂಥಹದೊಂದು ಪ್ರಯೋಗವನ್ನು ಖಜ್ಜಿಡೋಣಿ ಭಾಗದ ರೈತರಿಗೆ ತೋರಿಸಿಕೊಟ್ಟರೆ, ಗ್ರಾಮದ ಪ್ರಗತಿಪರ ರೈತರು, ಇಂಡೇನ್ ಗ್ಯಾಸ್ ಮಾಲೀಕ ಎಂ.ಎಸ್. ಶೆಟ್ಟರ್ ಅವರು ತಮ್ಮ ಜಮೀನಲ್ಲಿದ್ದ ತೊಗರಿ ಬೆಳೆಗೂ ಡ್ರೋನ್‌ನಿಂದ ಕ್ರಿಮಿನಾಶಕ ಸಿಂಪಡಿಸಿದರು.

ಕಡಿಮೆ ಖರ್ಚು ಹಾಗೂ ಸಮಯದ ಅಲ್ಪ ಸಮಯದಲ್ಲೇ ಬೆಳೆಗಳಿಗೆ ಕ್ರಿಮಿನಾಶಕ, ಗೊಬ್ಬರ ಸಿಂಪಡಿಸಬಹುದಾಗಿದೆ. ಇದನ್ನು ನೋಡಲೆಂದೇ ಗ್ರಾಮ ಸೇರಿ ಆಸುಪಾಸಿನ ಹಲವಾರು ರೈತರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net