ರೋಣದಲ್ಲಿ ಜೀರ್ಣೋದ್ಧಾರಕ್ಕೆ ಕಾದಿವೆ ಶಾಸನ, ಸ್ಮಾರಕ

17 RON-1
ರೋಣ ಪಟ್ಟಣದ ಈಶ್ವರನಗರದಲ್ಲಿನ ಶಿಲಾಶಾಸನ.
Published on

ರೋಣ: ಐತಿಹಾಸಿಕವಾಗಿ ಗುರುತಿಸಿಕೊಂಡಿರುವ ಪಟ್ಟಣದ ಶಾಸನಗಳು, ವೀರಗಲ್ಲುಗಳು, ಸ್ಮಾರಕಗಳು ಜೀರ್ಣೋದ್ಧಾರಕ್ಕಾಗಿ ಕಾಯುತ್ತಿವೆ.
ಜಿಲ್ಲೆಯ ಲಕ್ಕುಂಡಿ ಹೊರತುಪಡಿಸಿ ರೋಣದಲ್ಲಿ ಮಾತ್ರ ಜೈನ ಬಸದಿಗಳು, ಶೈವ ಪರಂಪರೆಯ ದೇವಾಲಯಗಳು ಸಾಕಷ್ಟಿವೆ.

ಣಾಚಾರ್ಯರು ಇಲ್ಲಿ ಗುರುಕುಲ ನಡೆಸುತ್ತಿದ್ದರು ಎಂದು ನಂಬಲಾಗಿದೆ. ಹೀಗಾಗಿಯೇ ಈ ಪಟ್ಟಣಕ್ಕೆ ದ್ರೋಣಾಪುರ ಎನ್ನುತ್ತಿದ್ದರು. ಅದು ಕ್ರಮೇಣ ರೋಣವಾಯಿತು ಎಂಬ ಪ್ರತೀತಿ ಇದೆ.ತಾಲ್ಲೂಕಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಬಾದಾಮಿ ಚಾಲುಕ್ಯರ, ರಾಷ್ಟ್ರಕೂಟರ, ಕಲ್ಯಾಣದ ಚಾಲುಕ್ಯರ, ಯಾದವರು, ಹೊಯ್ಸಳರ ಮತ್ತು ವಿಜಯನಗರ ಅರಸರ ಕಾಲದ 250ಕ್ಕೂ ಹೆಚ್ಚು ಶಿಲಾಶಾಸನಗಳು ಹಾಗೂ ವೀರಗಲ್ಲುಗಳು, ಗರುಡಗಲ್ಲುಗಳು, ಮಹಾಸತಿಕಲ್ಲುಗಳು ಪಟ್ಟಣದಲ್ಲಿ ಕಂಡುಬರುತ್ತವೆ.

ಹಕಾರಿ ಓಣಿಯ ಈಶ್ವರ ದೇವಸ್ಥಾನ ಕಲ್ಯಾಣದ ಚಾಲುಕ್ಯರ ಕಾಲದ್ದು. ಕಂಬಿಯವರ ಓಣಿಯ ಬಸವಣ್ಣನ ಗುಡಿಯನ್ನು ಸ್ಥಳೀಯರು ದ್ರೋಣಾಚಾರ್ಯರ ದೇವಾಲಯ ಎಂದೂ ಕರೆಯುವರು. ಸಂತೆ ಬಜಾರ್ ಸಮೀಪದಲ್ಲಿರುವ ಕೆರೆ ದಂಡೆ ಮೇಲೆ ರಾಮೇಶ್ವರ ದೇವಸ್ಥಾನವಿದೆ. ಶ್ರೀ ರಾಮನು ವನವಾಸದ ಸಂದರ್ಭದಲ್ಲಿ ಸ್ಥಾಪಿಸಿದ ಎನ್ನಲಾಗುತ್ತದೆ.

ಸೋಮೇಶ್ವರ ದೇವಾಲಯ, ಗುಡಿಯವರ ಓಣಿಯಲ್ಲಿನ ಅನಂತಶಯನ ದೇವಾಲಯ ಸಹ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಮಾಹಿತಿ ಲಭ್ಯವಿದೆ. ಬ್ಯಾಳಿಯವರ ಓಣಿಯ ಪಾಶ್ವನಾಥ ಬಸದಿಯು ಕಲ್ಯಾಣ ಚಾಲಕ್ಯರ ಅವಧಿಯಲ್ಲಿ ನಿರ್ಮಾಣವಾದ ಬಗ್ಗೆ ದಾಖಲೆಗಳಿವೆ.
ಪ್ರೇಕ್ಷಣೀಯ ಬಾವಿಗಳು: ರೋಣದ ಗೌಡರ ಬಾವಿ ಹಾಗೂ ಶೆಟ್ಟರ್ ಬಾವಿಗಳು ಆಕರ್ಷಕವಾಗಿದೆ. ಈ ಬಾವಿಗಳಲ್ಲಿ ಚಿಕ್ಕ ಈಶ್ವರ, ನಂದಿ, ಗಣಪತಿ ಕೆತ್ತನೆಗಳಿದ್ದು, ಕೆಳಗಿಳಿಯಲು ಸೋಪಾನಗಳಿವೆ. ಶೆಟ್ಟರ್ ಬಾವಿಯಲ್ಲಿ ಉಗ್ರ ನರಸಿಂಹ, ಗಣಪತಿ, ನಂದಿ, ಮಹಿಷಮರ್ದಿನಿ ಹಾಗೂ ಮಿಥುನ ಉಬ್ಬುಶಿಲ್ಪಗಳ ಕೆತ್ತನೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net