ಅಕ್ಕಮಹಾದೇವಿ ಜನ್ಮಸ್ಥಳದಲ್ಲಿ ಶಾಸನ ಪತ್ತೆ

Akkamahadevi
Published on

ಶಿಕಾರಿಪುರ: ವಚನಗಾರ್ತಿ ಅಕ್ಕಮಹಾದೇವಿ ಹುಟ್ಟೂರು ಉಡá-ತಡಿಯ ಅಭಿವೃದ್ಧಿ ಕಾಮಗಾರಿ ವೇಳೆ ಮಹತ್ವದ ಶಾಸನವೊಂದು ದೊರೆತಿದ್ದು, ಇದರಿಂದ ಅಕ್ಕನ ಜನ್ಮಸ್ಥಳ ಮತ್ತು ರಾಜ ಕೌಶಿಕನ ಬಗ್ಗೆ ಇತಿಹಾಸಗಳು ಪುಷ್ಟೀಕರಿಸಿದಂತಾಗಿದೆ.

ಈ ಶಾಸನ ಕ್ರಿಶ 1150-68ರ ಅವಧಿಯ ಕಲಚೂರಿ ಬಿಜ್ಜಳ ಅರಸನ ಕಾಲದ್ದಾಗಿದ್ದು, ಇದರಲ್ಲಿ ದಂಡನಾಯಕ ಕಸಪಯ್ಯ ನಾಯಕನ ಉಲ್ಲೇಖವಿದೆ. ಇವನು ಕ್ರಿಶ 1150-68ರ ಅವಧಿಯಲ್ಲಿ ಬಿಜ್ಜಳ ಅರಸನ ದಂಡನಾಯಕನಾಗಿ, ಬನವಾಸಿ 12000 ನಾಡಿನ ಮಹಾದಂಡನಾಯಕನಾಗಿ ಬಳ್ಳಿಗಾವಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ಮಾಡಿರುವುದು ಆನೇಕ ಶಾಸನಗಳಲ್ಲಿ ಉಲ್ಲೇಖವಿದೆ.

ಅಕ್ಕಮಹಾದೇವಿಯ ಜನ್ಮಸ್ಥಳವಾದ ಉಡುತಡಿಯ ಕೋಟೆಯಲ್ಲಿಯೇ ಕಸಪಯ್ಯ ನಾಯಕನ ಶಾಸನ ದೊರೆತಿರುವುದರಿಂದ ಇವನೆೇ ಕೌಶಿಕ ಮಹಾರಾಜ ಎಂಬುದಕ್ಕೆ ಹೆಚ್ಚಿನ ಸಾಕ್ಷ್ಯ ಈ ಶಾಸನದಿಂದ ದೊರೆತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net