

ಕಾಗವಾಡ: ನಡೆದಾಡುವ ದೇವರು, ವಿಜಯಪುರದ ಜ್ಞಾನ ಯೋಗಾಶ್ರಮದ ಲಿಂಗೈಕ್ಯ ಸಿದ್ದೇಶ್ವರ ಸ್ವಾಮೀಜಿ ಅವರ ಪ್ರಥಮ ಪುಣ್ಯಸ್ಮರಣೆಯ ನಿಮಿತ್ತ ಮಾಜಿ ಸಚಿವ ಶ್ರೀಮಂತ ಪಾಟೀಲ ಅವರು ಕೃಷ್ಣಾಕಿತ್ತೂರ ಗ್ರಾಮದ ಕೋ- ಆಫ್ ಕ್ರೆಡಿಟ್ ಸೊಸೈಟಿ ಆವರಣದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಕ್ತಿಪೂರ್ವಕ ಗೌರವ ನಮನ ಸಲ್ಲಿಸಿದರು.
ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ಪ್ರವಚನಗಳ ಮೂಲಕ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಶ್ರೀಗಳ ಸೇವೆ ಅಮೋಘ ಹಾಗೂ ಅನನ್ಯವಾದುದು. ಶ್ರೀಗಳ ನೆನಪು ನಮ್ಮೆಲ್ಲರ ಮನದಲ್ಲಿ ಸದಾ ಅಜರಾಮರವಾಗಿದೆ ಎಂದರು.
ಮುಖಂಡರಾದ ದಾದಾ ಪಾಟೀಲ, ಮಹಾಲಿಂಗ ಹೊನವಾಡ, ರಾಮ ನಾಯಿಕ, ಹರಿಬಾ ಹಂಚಿನಾಳೆ, ಲಗಮಣ್ಣ ಪಾಟೀಲ, ಸುಭಾಷ ಪಾಟೀಲ, ಬಸ್ಸು ಪಾಟೀಲ, ಚೇತನ ಮಂಟೂರ ಇದ್ದರು.