1,538 ಮನೆ ಮುಂದೆ ಏಕಕಾಲದಲ್ಲಿ ರಂಗೋಲಿ: ಅಣ್ಣೂರು ಗ್ರಾಪಂನಿಂದ ವಿನೂತನ ಪ್ರಯತ್ನ

Panchayat raj system
Published on

ಕೆ.ಎಂ.ದೊಡ್ಡಿ: ಪಂಚಾಯತ್ ರಾಜ್ ದಿವಸದ ಅಂಗವಾಗಿ ಏ.24ರಂದು ಅಣ್ಣೂರು ಗ್ರಾಮ ಪಂಚಾಯಿತಿಯಿಂದ ಏಕಕಾಲಕ್ಕೆ ಬರೋಬರಿ 1,538 ಮನೆ ಮುಂದೆ ರಂಗೋಲಿ ಹಾಕುವ ವಿನೂತನ ಪ್ರಯತ್ನ ಮಾಡಲಾಗುತ್ತಿದೆ.

ಪಂಚಾಯತ್ ರಾಜ್ ದಿನವನ್ನು ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ಅದರಂತೆ ಈ ಬಾರಿ ರಾಜ್ಯಾದ್ಯಂತ ಮಹಿಳಾಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ನಡೆಯುತ್ತಿದೆ. ಮಾ.8ರಂದು ಅಂತಾರಾಷ್ಟ್ರೀಯ ಮಹಿಳಾ ದಿನದೊಂದಿಗೆ ಪ್ರಾರಂಭವಾದ ಅಭಿಯಾನ ನಿರಂತರವಾಗಿ ನಡೆಸಲಾಗುತ್ತಿದೆ. ಅದರಲ್ಲೂ ಅಣ್ಣೂರು ಗ್ರಾಪಂನಿಂದ ಅಭಿಯಾನವನ್ನು ವಿಶೇಷ ಕಾರ್ಯಕ್ರಮದೊಂದಿಗೆ ಆಚರಣೆ ಮಾಡಲಾಗುತ್ತಿದೆ. ಅಂತೆಯೇ ಏ.24ರಂದು ಅಣ್ಣೂರು ಗ್ರಾಪಂ ವ್ಯಾಪ್ತಿಯ ಅಣ್ಣೂರು, ಆಲಭುಜನಹಳ್ಳಿ ಹಾಗೂ ಕಾರ್ಕಹಳ್ಳಿ ಗ್ರಾಮದಲ್ಲಿ ಏಕಕಾಲದಲ್ಲಿ ಎಲ್ಲ ಮನೆ ಎದುರು ಬಣ್ಣ ಬಣ್ಣದ ರಂಗೋಲಿ ಬಿಡಿಸಲಾಗುತ್ತಿದೆ. ಈ ಮೂಲಕ ಪಂಚಾಯತ್ ರಾಜ್ ದಿನದ ಮಹತ್ವ ಸಾರುವ ಸಂದೇಶ ಹಾಗು ದಿನಾಂಕ ಬರೆಸಲಾಗುತ್ತಿದೆ. ಮುಖ್ಯವಾಗಿ ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಪ್ರೇರಣೆ ನೀಡಲಾಗುತ್ತಿದೆ ಎಂದು ಪಿಡಿಒ ಅಶ್ವಿನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net