ನವನವೀನ ಉಡುಗೆ ತೊಟ್ಟು ಪ್ರಾರ್ಥನೆ

7 HBH 01
ಹಗರಿಬೊಮ್ಮನಹಳ್ಳಿ ಸೋನಿಯಾ ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ್‌ನಿಮ್ಮಿತ್ತ ಮುಸ್ಲಿ ಸಮುದಾಯದವರು, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಮುಖರಾದ ಖಾಸಿಂಸಾಬ್, ಮೆಹಬೂಬ್ ಸಾಬ್, ಸಾವುಲ್‌ಸಾಬ್, ಮಜೀದ್ ಗೌಸಿಯಾ, ಹಸನ್‌ಸಾಬ್, ದಾದಾಪೀರ್ ಮತ್ತಿತರರು ಇದ್ದರು.
Published on

ಹಗರಿಬೊಮ್ಮನಹಳ್ಳಿ: ತ್ಯಾಗ ಬಲಿದಾನಗಳ ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ, ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ, ಈದ್ಗಾ ಮೈದಾನಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವ ಮೂಲಕ, ಬಕ್ರೀದ್ ಹಬ್ಬವನ್ನು ಶನಿವಾರ ಸಡಗರ ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ಹಳೇ ಊರಿನ ತಂಬ್ರಹಳ್ಳಿ ರಸ್ತೆಯಲ್ಲಿರುವ ಮತ್ತು ರಾಮನಗರ ಸೋನಿಯಾಗಾಂಧಿ ನಗರದ ಹತ್ತಿರದಲ್ಲಿರುವ ಈದ್ಗಾ ಮೈದಾನ, ಹಳೇ ಊರಿನ ಆಲಿ ಅದೀಸ್ ಜಮಾಕಿನ ಮಸೀದ್‌ಗಳ, ಅದರಂತೆ ತಾಲೂಕಿನ ತಂಬ್ರಹಳ್ಳಿ, ಬನ್ನಿಗೋಳ, ಹಂಪಸಾಗರ, ಹನಸಿ, ಶಿಗೇನಹಳ್ಳಿ, ಯಡ್ರಮ್ಮನಹಳ್ಳಿ, ನಂದಿಪುರ ಸೇರಿದಂತೆ ಅನೇಕ ಗ್ರಾಮಸ್ಥರು ಈದ್ಗಾ ಮೈದಾನಕ್ಕೆ ನವನವೀನ ಉಡುಗೆಗಳನ್ನು ತೊಟ್ಟು, ಮಕ್ಕಳೊಂದಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಪುರಸಭೆ ನೈರ್ಮಲ್ಯ ನಿರ್ವಹಣ ಮೇಸ್ತ್ರಿ ಪಿ.ವೀರಣ್ಣ ಹಾಗೂ ಬಂದೋಬಸ್ ನೀಡಿದ ಪೊಲೀಸ್ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು.

ಸೋನಿಯಾ ನಗರದ ಈದ್ಗಾ ಮೈದಾನದಲ್ಲಿ ಜಮಾತಿಯಾ ಮಸೀದ್‌ನ ಮೌಲಾನ ಶೋಯಿಬ್ ಆಲಂಸಾಬ್, ರಾಮನಗರದ ಮೌಲಾನಾ ಗುಲಾಮ್ ಜಿಲಾನಿ, ಸೋನಿಯಾನಗರದ ಮೌಲಾನಾ ಗರೀಬ್ ನವಾಜ್ ಹಾಗೂ ಮೌಲಾನಾ ಬಸೀರ್ ಧರ್ಮ ಗುರುಗಳು ಮತ್ತು ಪುರಸಭೆ ಸದಸ್ಯ ನೆಲ್ಲು ಇಸ್ಮಾಯಿಲ್, ಇರ್ಫಾನ್ ಸೈಯದ್, ರಾಜಭಕ್ಷಿ, ಬುಡೇನ್ ಸಾಬ್, ಆಟೋ ರಾಜಕ್, ಎಣ್ಣಿಬಾಷಾ, ದಾದಾ ಖಲಂದರ್, ಕುಲ್ಮಿ ರಹಿಮಾನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net