

ತೀರ್ಥಹಳ್ಳಿ: ಪಾರಂಪರಿಕ ಮತ್ತು ಪುರಾಣ ಕಾಲದಿಂದಲೂ ಬಳಕೆಯಲ್ಲಿರುವ ದೇಸಿ ಚಿಕಿತ್ಸಾ ಪದ್ಧತಿಯಾದ ಆಯುರ್ವೇದ ಚಿಕಿತ್ಸೆಯಲ್ಲೂ ಪರಿಣಾಮಕಾರಿ ಬದಲಾವಣೆ ಆಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹಿರಿಯ ವೈದ್ಯ ಡಾ. ಸದಾಶಿವ ನಿಲುವಾಸೆ ಹೇಳಿದರು.
ಪಟ್ಟಣದ ಪ್ರಶಾಂತಿ ಚಿಕಿತ್ಸಾಲಯದಲ್ಲಿ ಭಾನುವಾರ ಆರಂಭಗೊಂಡ ಬಂಜೆತನ ನಿವಾರಣೆ ಮತ್ತು ಮೂಲವ್ಯಾಧಿ ಚಿಕಿತ್ಸಾ ಘಟಕದ ಉಧ್ಘಾಟನೆ ನೆರವೇರಿಸಿ ಮಾತನಾಡಿದರು.
ಇಂದಿನ ಆಧುನಿಕ ದಿನಗಳಲ್ಲೂ ಮುಗ್ಧರು ಅವೈಜ್ಞಾನಿಕವಾದ ಚಿಕಿತ್ಸಾ ಪದ್ಧತಿ ಮತ್ತು ಔಷಧಗಳ ಬಗೆಗೆ ಅರಿವಿಲ್ಲದೆ ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿ. ಮೂಢನಂಬಿಕೆ ಮತ್ತು ಪ್ರಚಾರಕ್ಕೆ ಮರುಳಾಗಿ ಜೀವಕ್ಕೇ ಮಾರಕವಾಗಬಹುದಾದ ಇಂತಹ ಚಿಕಿತ್ಸೆ ಮತ್ತು ಔಷಧಗಳ ಬಗ್ಗೆ ಎಚ್ಚರಿಕೆ ಅಗತ್ಯ. ತಜ್ಞ ವೈದ್ಯರಾಗಿ ಆಯುರ್ವೇದ ಚಿಕಿತ್ಸೆಯಲ್ಲಿ ತನ್ನೂರಿನ ಜನತೆಗೆ ಆಧುನಿಕ ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸುವ ಸದಾಶಯದೊಂದಿಗೆ ಡಾ. ಸುಮೇಧ ಅವರ ಈ ಪ್ರಯತ್ನ ಪ್ರಶಂಸನೀಯವಾಗಿದೆ ಎಂದರು.
ಆಯುಷ್ ಇಲಾಖೆಯ ತಾಲೂಕು ವೈದ್ಯಾಧಿಕಾರಿ ಡಾ. ಗಣೇಶ್ ಕಾಮತ್, ಇತಿಹಾಸ ಸಂಶೋದಕ ಜಿ.ಆರ್.ಸತ್ಯನಾರಾಯಣ ಇದ್ದರು.