ಇನ್ನರ್ ವೀಲ್ ಕ್ಲಬ್ ಆಫ್ ಗದಗ್ ಮಿಡ್ ಟೌನ್ ಹಾಗೂ ನೀಮಾ ಅಸೋಸಿಯೇಷನ್ ಇವರ ಸಹಯೋಗದಿಂದ ಉಚಿತ ಆರೋಗ್ಯ ತಪಾಸಣೆ.

22GDG05
Published on

ಇನ್ನರ್ ವೀಲ್ ಕ್ಲಬ್ ಅಫ್ ಗದಗ್ ಮಿಡ್  ಟೌನ್ ಹಾಗೂ ನೀಮಾ ಅಸೋಸಿಯೇಷನ್ ಇವರ ಸಹಯೋಗದೊಂದಿಗೆ ಮುಳುಗುಂದ್ ನಗರದಲ್ಲಿರುವ ವಾಸವಾಗಿರುವ  ಕೃಷಿಯಲ್ಲಿ ಸಾಧನೆ ಮಾಡಿದಂತಹ ಶ್ರೀಮತಿ   ಮಂಗಲಾ  ನೀಲಗುಂದ ಅವರ ಮನೆಯಲ್ಲಿ ಮಹಿಳೆಯರಿಗೆ ಹಾಗೂ  ಪುರುಷರಿಗೆ  ಕ್ಲಬ್ಬಿನ ಮಾಜಿ ಅಧ್ಯಕ್ಷರಾದ  ಹಾಗೂ ನೀಮಾ ಫೋರಮ್ ಅಸೋಸಿಯೇಷನ್ ಅಧ್ಯಕ್ಷರಾದ  ಡಾ. ರಾಜೇಶ್ವರಿ ಹಿರೇಮಠ  ಉಚಿತವಾಗಿ ಆರೋಗ್ಯ ತಪಾಸಣೆಯನ್ನು ಮಾಡಿದರು. ಬಿಪಿ ತಪಾಸಣೆ, ಕ್ಯಾಲ್ಸಿಯಂ ಕಡಿಮೆ ಇದ್ದವರಿಗೆ ಮಾತ್ರೆ ಮತ್ತು ಔಷಧಿ  ಹಾಗೂ 40 ವರ್ಷದ ನಂತರ ಮಹಿಳೆಯರಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆಗುವ ಬದಲಾವಣೆಯ ಬಗ್ಗೆ ತಿಳಿಸಿಕೊಟ್ಟರು.  ಕ್ಲಬ್ಬಿನ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಬಿರಾದಾರ್, ಕಾರ್ಯದರ್ಶಿ ಶ್ರೀಮತಿ ಪ್ರೀತಿ ಶಿವಪ್ಪನಮಠ  ಖಜಾಂಚಿ ಶ್ರೀಮತಿ ರಾಣಿ ಚಂದಾವರಿ, ಮಾಜಿ ಅಧ್ಯಕ್ಷರುಗಳಾದ ಶ್ರೀಮತಿ ಅಕ್ಕಮ್ಮ ಶಿರೋಳ್, ಶ್ರೀಮತಿ ವಿಜಯ ಹಿರೇಗೌಡರ್, ಶ್ರೀಮತಿ ಪಾರ್ವತಿ ಶಾಬಾದಿಮಠ, ಶ್ರೀಮತಿ  ಪೂರ್ಣಿಮಾ  ಹುಲಕೋಟಿ, ಹಾಗೂ ಶ್ರೀಮತಿ ಡಾ. ಲಲಿತಾ ಲಿಂಗಾರೆಡ್ಡಿ  ಸದಸ್ಯರಾದ  ಶ್ರೀಮತಿ ಮಂಗಲಾ  ಶಾಬಾದಿಮಠ, ಶ್ರೀಮತಿ ದೇವಡಿಗ  ಮತ್ತು ಶ್ರೀಮತಿ ನಂದಾ ಹುಲಕೋಟಿ  ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net