

ಇನ್ನರ್ ವೀಲ್ ಕ್ಲಬ್ ಆಫ್ ಗದಗ್ ಮಿಡ್ ಟೌನ್, ಜನವರಿ 10 ರಂದು 1೦೦ ನೇಯ ಅಂತರಾಷ್ಟ್ರೀಯ ಇನ್ನರ್ ವೀಲ್ ಡೇಯನ್ನು ಕ್ಲಬ್ಬಿನ ಚಾರ್ಟರ್ ಪ್ರೆಸಿಡೆಂಟ್ ಆದ ಶ್ರೀಮತಿ ಸ್ನೇಹ ಗೋಡಕಿಂಡಿ ಅವರ ಕಣಗಿನಾಳ ತೋಟದಲ್ಲಿ, ಕೇಕ್ ಕತ್ತರಿಸಿ ಶುಭಾಶಯ ಕೋರುವ ಮೂಲಕ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳು, ಈ ಸಿ ಮೆಂಬರ್ಸ್, ಮತ್ತು ಸದಸ್ಯರು, ಭಾಗವಹಿಸಿದ್ದರು. ವೇದಿಕೆಯ ಮೇಲೆ ಚಾರ್ಟರ್ ಪ್ರೆಸಿಡೆಂಟ್ ಶ್ರೀಮತಿ ಸ್ನೇಹ ಗೋಡಕಿಂಡಿ, ಮಾಜಿ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಕವಲೂರ್ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಬಿರಾದಾರ್, ಕಾರ್ಯದರ್ಶಿಯಾದ ಶ್ರೀಮತಿ ಪ್ರೀತಿ ಶಿವಪ್ಪನಮಠ, ಖಜಾಂಚಿ ಶ್ರೀಮತಿ ರಾಣಿ ಚಂದಾವರಿ, ಐ. ಎಸ್.ಓ ಶ್ರೀಮತಿ ಸುವರ್ಣ ಹೊನ್ನಗುಡಿ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಕವಲೂರ್ ಇನ್ನರ್ ವೀಲ್ ಕ್ಲಬ್ಬಿನ ಬಗ್ಗೆ ಮಾತನಾಡಿ, ಇನ್ನರ್ ವೀಲ್ ಕ್ಲಬ್ ಅನ್ನು 1924 ರಲ್ಲಿ ಮಾರ್ಗರೆಟ್ ಗೋಲ್ಡಿಂಗ್ ಅವರು ಸ್ಥಾಪಿಸಿದರು. ಇದು ಇಂದಿನ ಸುಮಾರು 4,000 ಇನ್ನರ್ ವೀಲ್ ಕ್ಲಬ್ ಗಳನ್ನು ಹೊಂದಿದೆ. 2024 ರ ಹೊತ್ತಿಗೆ, ಇನ್ನರ್ ವೀಲ್ 100 ದೇಶಗಳಲ್ಲಿ 120,000 ಕ್ಕೂ ಹೆಚ್ಚು ಸದಸ್ಯರೊಂದಿಗೆ ಬೆಳೆದಿದೆ. ಜುಲೈ ೧ ರಿಂದ ಪ್ರಾರಂಭವಾಗುತ್ತದೆ ಮತ್ತು ಜೂನ್ 30 ಕ್ಕೆ ಕೊನೆಗೊಳ್ಳುತ್ತದೆ. ಪ್ರತಿಯೊಬ್ಬ ಇನ್ನರ್ ವ್ಹೀಲ್ ಸದಸ್ಯನಿಗೆ ಅಧಿಕಾರವನ್ನು ಹೊಂದಲು, ಅನುಭವಿಸಲು, ಕಲಿಯಲು ಮತ್ತು ಮುನ್ನಡೆಸಲು ಅವಕಾಶವಿದೆ ಎಂದು ಅತ್ಯಂತ ಸರಳವಾಗಿ ಮಾಹಿತಿಯನ್ನು ನೀಡಿದರು.
ಮಾಜಿ ಅಧ್ಯಕ್ಷರಾದ ಶ್ರೀಮತಿ ಆರತಿ ಜೀರಂಕಳ್ಳಿ ಹೌಸಿ ಗೇಮ್ಸ್ ಆಡಿಸಿದರು. ನಿರೂಪಣೆಯನ್ನು ಅಧ್ಯಕ್ಷರಾದ ಶ್ರೀಮತಿ ಲತಾ ಮುತ್ತಿನಪೆಂಡಿಮಠ, ಕಾರ್ಯದರ್ಶಿಯಾದ ಶ್ರೀಮತಿ ಪ್ರೀತಿ ಶಿವಪ್ಪನಮಠ ವಂದನಾರ್ಪಣೆಯನ್ನು ಮಾಡಿದರು. ಪ್ರೀತಿಯ ಭೋಜನವನ್ನು ಶ್ರೀಮತಿ ಸ್ನೇಹ ಗೋಡಕಿಂಡಿಯವರು ವಹಿಸಿಕೊಂಡಿದ್ದರು.