ಇನ್ನರ್ ವೀಲ್ ಕ್ಲಬ್ ಆಫ್ ಗದಗ ಮಿಡ್ ಟೌನ ಪದಾಧಿಕಾರಿಗಳ ಪದಗ್ರಹಣ

08GDG04
Published on

ಗದಗ: ನಗರದಲ್ಲಿ ಇತ್ತೀಚಿಗೆ ೨೦೨೩-೩೪ ಸಾಲಿನ ಇನ್ನರ್ ವೀಲ್ ಕ್ಲಬ್ ಗದಗ್ ಮಿಡ್ ಟೌನ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರಗಿತು.

ನೂತನ ಅಧ್ಯಕ್ಷರಾಗಿ ಶ್ರೀಮತಿ ವಿಜಯಲಕ್ಷ್ಮಿe ಬಿರಾದಾರ, ಕಾರ್ಯದರ್ಶಿಯಾಗಿ ಪ್ರೀತಿ ಶಿವಪ್ಪನಮಠ, ಖಜಾಂಚಿಯಾಗಿ ರಾಣಿ ಚಂದಾವರಿ, ಐ ಸ್ ಓ ಆಗಿ ಸುವರ್ಣಾ ಹೋನಗುಡಿ, ಎಡಿಟರ್ ಆಗಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಗೀತಾ ಮಾನ್ವಿ, ಐ ಪಿ ಪಿ ಆಗಿ ಶ್ರೀಮತಿ ಲತಾ ಮುತ್ತಿನಪೆಂಡಿಮಠ, ಡಿಸ್ಟಿಕ್ ಎಡಿಟರ್ ಆದ ಶ್ರೀಮತಿ ಸಹನ ಪೈಕೋಟಿ ಇವರು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

೨೦೨೩-೨೪ರ ಕಾರ್ಯಕಾರಿ ಸಮೀತಿಯ್ ಸದಸ್ಯರಾಗಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಡಾ. ಲಲಿತಾ ಲಿಂಗಾರೆಡ್ಡಿ, ಮಾಜಿ ಅಧ್ಯಕ್ಷರಾದ ಶ್ರೀಮತಿ ಡಾ. ಉಮಾ ಗಾಣಿಗೇರ್, ಮಾಜಿ ಅಧ್ಯಕ್ಷರಾದ ಶ್ರೀಮತಿ ಶೋಭಾ ಹಿರೇಮಠ್, ಮಾಜಿ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ಬಳಿಗಾರ್ , ಮಾಜಿ ಅಧ್ಯಕ್ಷರಾದ ಶ್ರೀಮತಿ ಅನುಪಮಾ ಜೋಳದ, ಮಾಜಿ ಅಧ್ಯಕ್ಷರಾದ ಶ್ರೀಮತಿ ಆರತಿ ಜಿರನಕಳಿ ಅಧಿಕಾರ ವಹಿಸಿಕೊಂಡರು.

ಈ ವರ್ಷವೂ ನಮ್ಮ ಕ್ಲಬ್ಬಿಗೆ ಹೊಸ ನೂತನ ಸದಸ್ಯಯಾಗಿ ಶ್ರೀಮತಿ ಸುಧಾ ಮುತ್ತಗಿ ಸೇರ್ಪಡೆ ಕೊಂಡರು. ಇವರ ಪರಿಚಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಕವಲೂರ್ ಹೇಳಿದರು.

ಬಡ ಮಕ್ಕಳಿಗಾಗಿ ಧನ ಮತ್ತು ಪುಸ್ತಕ ಸಹಾಯ ಮಾಡಿದರು. ಮಾಜಿ ಅಧ್ಯಕ್ಷರಾದ ಶ್ರೀಮತಿ ಸಂಧ್ಯಾ ಪೋತಿಸ್, ಮಾಜಿ ಅಧ್ಯಕ್ಷರಾದ ಶ್ರೀಮತಿ ಅಕ್ಕಮ್ಮಾ ಶಿರೋಳ, ಮಾಜಿ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಕವಲೂರ್  ಪ್ರಾಯೋಜಕ ರಾಗಿದ್ದರು. 

ಶ್ರೀಮತಿ ಅನ್ನಪೂರ್ಣ ಹಿರೇಮಠ ಪ್ರಾರ್ಥನೆ ಗೀತೆ ಹಾಡಿದರು,ಐ ಪಿ ಪಿ ಆದ ಶ್ರೀಮತಿ ಲತಾ ಮುತ್ತಿನಪೆಂಡಿಮಠ ಸ್ವಾಗತಿಸಿದರು, ಕಾರ್ಯದರ್ಶಿಯಾದ ಶ್ರೀಮತಿ ಪ್ರೀತಿ ಶಿವಪ್ಪಮಠ್ ವಂದನಾರ್ಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net