

ಹುಬ್ಬಳ್ಳಿ: ಇಲ್ಲಿಯ ಇನ್ನರವ್ಹೀಲ್ ಕ್ಲಬ್ ನಿಂದ ಹ್ಯಾಪಿ ಸ್ಕೂಲ್ ಎಂದು ಘೋಷಿಸಲಾಗಿರುವ ನವನಗರದ ಸರ್ಕಾರಿ ಪ್ರಾಥಮಿಕ ಪಬ್ಲಿಕ್ ಶಾಲೆಗೆ ಕ್ಲಬ್ ಜಿಲ್ಲಾ ಚೇರ್ಮನ್ ಜ್ಯೋತಿ ಕಿರಣದಾಸ ಭೇಟಿ ನೀಡಿ ಫಲಕ ಅನಾವರಣ ಮಾಡಿದರು.
ಕಟ್ಟಡ ದುರಸ್ತಿ ಮಾಡಿ ಬಣ್ಣ ಬಳಿದು ಸೌಂದರೀಕರಣ ಮಾಡಲಾಗಿದೆ. ಸಲಕರಣೆ ಒದಗಿಸಲಾಗಿದೆ ಎಂದರು ತಿಳಿಸಿದರು.
ಕ್ಲಬ್ ಅಧ್ಯಕ್ಷೆ ಡಾ. ವಿಜಯಶ್ರೀ ಕಲಬುರ್ಗಿ, ಮಾಜಿ ಚೇರ್ಮನ್ ಲತಾ ಜಮಖಂಡಿ, ಸುಮಾ ಪಾಟೀಲ, ಪಾಲಿಕೆ ಸದಸ್ಯೆ ಸುನಿತಾ ಮಾಳವದಕರ, ಇತರರು ಇದ್ದರು.