

Gadag: ಇನ್ನರ್ ವೀಲ್ ಕ್ಲಬ್ ಆಫ್ ಗದಗ್ ಮಿಡ್ ಟೌನ್ ವತಿಯಿಂದ ಗದಗ್ ಕಲ್ಯಾಣ್ ನಗರದಲ್ಲಿ ಟೆಂಟ್ ಹಾಕಿಕೊಂಡು ವಾಸವಾಗಿರುವಂತಹ ಬುಡಕಟ್ಟು ಜನಾಂಗದ ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಾಯಿತು . ಇವರು ಒಂದು ಊರಿನಿಂದ ಇನ್ನೊಂದು ಊರಿಗೆ ವಲಸೆ ಹೋಗುತ್ತಾರೆ. ಇವರಿಗೆ ಸಹಾಯವಾಗಲೆಂದು ಸೀರೆಗಳನ್ನು ವಿತರಿಸಲಾಯಿತು. ಇವರು ಸಂತೋಷವನ್ನು ವ್ಯಕ್ತಪಡಿಸಿ ತುಂಬು ಹೃದಯದ ಧನ್ಯವಾದಗಳನ್ನು ನಮಗೆ ತಿಳಿಸಿದರು. ಇದರ ಪ್ರಾಯೋಜಕತ್ವವನ್ನು ಸೂರ್ಯ ನಗರದ ನಿವಾಸಿಯಾದ ಶ್ರೀಮತಿ ಜಯಶ್ರೀ,ಗಿರಡ್ಡಿ ಅವರು ವಹಿಸಿಕೊಂಡಿದ್ದರು.
.ಕ್ಲಬ್ಬಿನ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಬಿರಾದಾರ್, ಖಜಾಂಚಿ ಶ್ರೀಮತಿ ರಾಣಿ ಚಂದಾವರಿ, ಸೂರ್ಯ ನಗರದ ನಿವಾಸಿಯಾದ ಶ್ರೀಮತಿ ಜ್ಯೋತಿ ಕಳಸಗೊಂಡ ಉಪಸ್ಥಿತರಿದ್ದರು.