ಇನ್ನರ್​ವ್ಹೀಲ್​ ಕ್ಲಬ್​ ಗದಗ ಬೆಟಗೇರಿ ಸುವರ್ಣಮಹೋತ್ಸವ

17GDG03
Published on

ಗದಗ:
ಇನ್ನರ್​ವ್ಹೀಲ್​ ಕ್ಲಬ್​ ಗದಗ ಬೆಟಗೇರಿ ಸಂಸ್ಥೆ 50 ವರ್ಷ ಪೂರೈಸಿರುವ ಹಿನ್ನಲೆ ನಗರದ ಕೆಎಲ್​ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭಾನುವಾರ ಸುವರ್ಣ ಮಹೋತ್ಸವ ಕಾರ್ಯಕ್ರಮ ಜರುಗಿತು.
ಕ್ಲಬ್​ ಅಧ್ಯೆ ರಜನಿ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅವಸರದ ಜಗತ್ತು, ಕೆಲಸದ ಒತ್ತಡ, ಉದ್ವೇಗದ ಮನಸ್ಸು ಹೃದಯ ತೊಂದರೆಗಳಿಗೆ ಎಡೆ ಮಾಡಿಕೊಡುತ್ತದೆ. ಸದೃಢ ಭಾರತ ನಿರ್ಮಾಣವಾಗಲು ದೇಶಿ ಆಹಾರದ ಸೇವನೆ ಹೆಚ್ಚು ಸೂಕ್ತವೆಂದು ಹೇಳಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಂ. ಬಿ. ಕೊಳವಿ, ಡಾ. ರಾಜಶೇಖರ ಸಜ್ಜನರ, ವಿಜಯಲಕ್ಷಿ$್ಮ ಮಾನ್ವಿ, ದೀಪಾ ಪಟ್ಟಣಶೆಟ್ಟಿ, ನಾಗರತ್ನ ಕಲ್ಲೊಳಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net