Gadag: ಇನ್ನರ್ ವೀಲ್ ಕ್ಲಬ್ ಗದಗ್ ಮಿಡ್ ಟೌನ್ ದಿಂದ LPG ಸುರಕ್ಷತಾ ಕ್ರಮಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು, ಅಧ್ಯಕ್ಷರಾದ ಶ್ರೀಮತಿ ಪ್ರೀತಿ ಶಿವಪ್ಪನಮಠ ಅವರ ನಿವಾಸದಲ್ಲಿ,ವಕ್ಕಲಗೇರಿ ಓಣಿಯಲ್ಲಿ ದಿನನಿತ್ಯ ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗಾಗಿ ಆಯೋಜಿಸಲಾಗಿತ್ತು.
ನಮ್ಮ ಕ್ಲಬ್ಬಿನ ಸದಸ್ಯರಾದ ಹಾಗೂ ಎಲ್ ಪಿ ಜಿ ಗ್ಯಾಸ್ ಅಳವಂಡಿ ಗ್ರಾಮದ ಅಧಿಕೃತ ಮಾರಾಟಗಾರರಾದ ಶ್ರೀಮತಿ ರಶ್ಮಿ ಕುರುಗೋಡ ಇವರು ಎಲ್‍ಪಿಜಿ ಗ್ಯಾಸ್ ನ ಸುರಕ್ಷತಾ ಕ್ರಮಗಳ ಕುರಿತು ಪ್ರಾಯೋಗಿಕವಾಗಿ ತಿಳಿಸುತ್ತಾ, ಸಿಲಿಂಡರಗಳನ್ನು ಯಾವಾಗಲೂ ನೇರವಾಗಿ ಇರಿಸಬೇಕು ಮತ್ತು ಅದರ ಹತ್ತಿರ ಬೇಗ ಬೆಂಕಿಹತ್ತಿಕೊಳ್ಳುವ ಮತ್ತು ಸುಡುವ ವಸ್ತುಗಳನ್ನು ಇಡಬೇಡಿ. ಸುರಕ್ಷತೆಗಾಗಿ ಪ್ರತಿ ವರ್ಷಕ್ಕೊಮ್ಮೆ ಟ್ಯೂಬ್‌ಗಳನ್ನು ಬದಲಾಯಿಸಿ. ಯಾವಾಗಲೂ ISI ಅನುಮೋದಿತ ಟ್ಯೂಬ್‌ಗಳನ್ನು ಬಳಸಿ ನಿಮ್ಮ ಎಲ್‌ಪಿಜಿ ಸಿಸ್ಟಮ್‌ನ ಎಲ್ಲಾ ಭಾಗಗಳು ಉತ್ತಮ ಸ್ಥಿತಿಯಲ್ಲಿವೆಯೇ ಎಂದು ಖಚಿತಪಡಿಸಿಕೊಳ್ಳಿ ಎಂದು ಮಾಹಿತಿಗಳನ್ನು ನೀಡಿದರು.
ವೇದಿಕೆ ಮೇಲೆ ಅಧ್ಯಕ್ಷರಾದ ಶ್ರೀಮತಿ ಪ್ರೀತಿ ಶಿವಪ್ಪನ ಮಠ, ಖಜಾಂಚಿ ಆದ ಶ್ರೀಮತಿ ಮಂಗಳ ನಾಲ್ವತ್ವಾಡಮಠ , ಹಾಗೂ ಶೋಭಾ ಪಿಳ್ಳೆ, ವೀಣಾ ಶಿವಪ್ಪನ ಮಠ, ಸುನಂದ ಮಟ್ಟಿ, ರೇಣವ್ವ ಮೊಗಳಿ ಹಾಗೂ ಓಣಿಯ ಅನೇಕ ಮಹಿಳೆಯರು ಉಪಸ್ಥಿತರಿದ್ದು ಕಾರ್ಯಕ್ರಮದ ಪ್ರಯೋಜನ ಪಡೆದರು.