

ನಗರದ ಕೆ. ವಿ. ಎಸ್. ಆರ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ದಲ್ಲಿ ಸೈಬರ್ ಕ್ರೈಮ ಹಾಗೂ ಮಾದಕ ವಸ್ತುಗಳ ಅಪರಾಧ ತಡೆಗಟ್ಟುವ ಕಾರ್ಯಕ್ರಮ ಜರಗಿತು.
ಮೊದಲನೆಯದಾಗಿ ಪ್ರಾಸ್ತಾವಿಕ ನುಡಿಯನ್ನು ಕ್ಲಬ್ಬಿನ ಮಾಜಿ ಅಧ್ಯಕ್ಷರಾದ ಶ್ರೀಮತಿ ಆರತಿ ಜೀರಂಕಳ್ಳಿ ಅವರು ಮಾತನಾಡಿದರು. ಗದಗ್ ಪೊಲೀಸ್ ಇನ್ಸ್ಪೆಕ್ಟರ್ ಸಿ. ಇ. ಎನ್. ವಿಭಾಗದ ಶ್ರೀ ಎಸ್. ಎಮ್. ಶಿರುಗುಪ್ಪಿ ಸರ್
ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆ ಯುವ ಸಮಾಜಕ್ಕೆ ಅಂಟಿದ ದೊಡ್ಡ ಪಿಡುಗು, ಇದರ ಸೇವನೆಯಿಂದ ಜ್ಞಾಪಕ ಶಕ್ತಿ,ಮಾನಸಿಕ ಗೊಂದಲ,ದೃಢ ನಿರ್ಧಾರವಿಲ್ಲದೆ ಬದುಕನ್ನು ಅರ್ಥೈಯಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಮತ್ತು ಈ ನಿಟ್ಟಿನಲ್ಲಿ ಕಾಲೇಜು ಆವರಣ ಮತ್ತು ಸುತ್ತಲು ಇಂತಹ ಕೃತ್ಯದಲ್ಲಿ ತೊಡಗುವ ವ್ಯಕ್ತಿಗಳ ಬಗ್ಗೆ ಯುವಕರು ಎಚ್ಚರದಿಂದ ಇರಬೇಕು, ಮಕ್ಕಳ ಬೆಳವಣಿಗೆಯಲ್ಲಿ ತಂದೆ ತಾಯಿಗಳ ಸಹಕಾರ ಬಹು ಮುಖ್ಯವಾಗಿರುತ್ತದೆ. ಜೀವನದಲ್ಲಿ ಏನಾದರೂ ಸಾಧನೆ ಮಾಡುವ ಗುರಿ ಇರಬೇಕು. ಗುರಿ ಮುಟ್ಟಲಿಕ್ಕೆ ಗುರುಗಳ ಸಹಕಾರ ಇರಬೇಕು ಗುರು ಹಿರಿಯರ ಹಾಗೂ ತಂದೆ-ತಾಯಿಗಳ ಗೌರವ ಕೊಡಬೇಕು ಎಂದು ಮನ ಮುಟ್ಟುವ ರೀತಿಯಲ್ಲಿ ಸಲಹೆ ನೀಡಿದರು .
ಕ್ಲಬ್ಬಿನ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಬಿರಾದಾರ್, ಖಜಾಂಚಿಯಾದ ಶ್ರೀಮತಿ ರಾಣಿ ಚಂದಾವರಿ, ಮಾಜಿ ಅಧ್ಯಕ್ಷರಾದ ಶ್ರೀಮತಿ ಆರತಿ ಜೀರಂಕಳ್ಳಿ ಮೆಂಬರ್ ಆದ ಶ್ರೀಮತಿ ದೀಪಾ ಉಗಲಾಟ, ಪ್ರಾಚಾರ್ಯರಾದ ಶ್ರೀ ಉಮೇಶ್ ಹಿರೇಮಠ್, ರಾಜ್ಯಶಾಸ್ತ್ರ ಹಿರಿಯ ಉಪನ್ಯಾಸಕರಾದ ಜಿ ಎಂ ಹಕಾರಿ, ಸತೀಶ್ ಪಾಸಿ, ಆರ್ ಬಿ ಜೋಗಿನ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕನ್ನಡ ಹಿರಿಯ ಉಪನ್ಯಾಸಕರಾದ ಸತೀಶ್ ಪಾಸಿ ನಿರುಪಿಸಿ, ಹಾಗೂ ವಂದಿಸಿದರು.