ಇನ್ನರ್ ವೀಲ್ ಸಂಸ್ಥೆ ಪದಾಧಿಕಾರಿಗಳ ಪದಗ್ರಹಣ

24KMD-1
ಕೆ.ಎಂ.ದೊಡ್ಡಿಯ ಚಾಂಶುಗರ್ಸ್‌ ಸಕ್ಕರೆ ಕಾರ್ಖಾನೆಯ ಅತಿಥಿ ಗೃಹದಲ್ಲಿ ಇನ್ನರ್ ವೀಲ್ ಸಂಸ್ಥೆಯ ಪದಗ್ರಹಣ ಹಾಗೂ ಸ್ಥಾಪನಾ ಸಮಿತಿ ಸಭೆ ಜರುಗಿತು.
Published on

ಕೆ.ಎಂ.ದೊಡ್ಡಿ: ಇನ್ನರ್ ವೀಲ್ ಸಂಸ್ಥೆ ಸಮಾಜಮುಖಿ ಕೆಲಸಗಳಿಂದ ಜನಪರ ಸಂಘಟನೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ನೂತನ ಅಧ್ಯಕ್ಷೆ ಧರಣಿ ಪುಟ್ಟೇಗೌಡ ತಿಳಿಸಿದರು.

ಇಲ್ಲಿನ ಚಾಂಶುಗರ್ಸ್‌ ಸಕ್ಕರೆ ಕಾರ್ಖಾನೆಯ ಅತಿಥಿಗೃಹದಲ್ಲಿ ಇನ್ನರ್ ವೀಲ್ ಸಂಸ್ಥೆ ಪದಾಧಿಕಾರಿಗಳ ಪದಗ್ರಹಣ ಹಾಗೂ ಸ್ಥಾಪನಾ ಸಮಿತಿ ಸಭೆಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಕೆ.ಎಂ.ದೊಡ್ಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡು ಸಮಾಜವನ್ನು ಅಭಿವೃದ್ಧಿಪಡಿಸಲು ಹಾಗೂ ಪರಿಸರ ಸಂರಕ್ಷಣೆ ಮಾಡಲು ನಾನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ಇನ್ನರ್ ವಿಲ್ ಸಂಸ್ಥೆಗೆ ಅಧ್ಯಕ್ಷೆಯಾಗಿ ಆಯ್ಕೆ ಮಾಡಲು ಶ್ರಮಿಸಿದ ಎಲ್ಲ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಇನ್ನರ್ ವೀಲ್ ಸಂಸ್ಥೆಯ ಮಾಜಿ ಅಧ್ಯಕ್ಷೆ ಲಕ್ಷ್ಮೀ ಮಂಜುಳಾ ಬೋರೇಗೌಡ ಮಾತನಾಡಿ, ಇನ್ನರ್‌ವೀಲ್ ಸಂಸ್ಥೆ ಒಂದು ಸೇವಾ ಸಂಸ್ಥೆಯಾಗಿದ್ದು, ಎಲ್ಲರೂ ತಮ್ಮ ಸ್ವಾರ್ಥ ಬಿಟ್ಟು ಸಮಾಜಮುಖಿ ಕೆಲಸದಲ್ಲಿ ತೊಡಗಿದಾಗ ಮಾತ್ರ ಸುತ್ತಮುತ್ತಲ ಪರಿಸರ ಪ್ರಜ್ವಲಿಸಲಿದೆ ಎಂದರು.

ಇನ್ನರ್ ವೀಲ್ ಸಂಸ್ಥೆಯ ಸದಸ್ಯರಾದ ಟಿ.ಬಿ.ಹಳ್ಳಿಪುಟ್ಟಮ್ಮ, ಪುಟ್ಟರತ್ನಮ್ಮ, ಸೌಭಾಗ್ಯಾ, ಲೀಲಾ, ಪಿಡಿಓ ಸುಧಾ, ಮೆಳ್ಳಹಳ್ಳಿ ತಾರಾ, ಯೋಗಶ್ರೀ, ದಿವ್ಯಾ, ರಶ್ಮಿ, ನಿರ್ಮಲಾ, ಮಾನಸಾ, ಸುಧಾ, ಪ್ರಭಾ, ಆಶಾ, ನಂದ, ಇಂದ್ರ, ರಶ್ಮಿ ಇದ್ದರು.

ಪದಾಧಿಕಾರಿಗಳ ಪದಗ್ರಹಣ : ಕೆ.ಎಂ.ದೊಡ್ಡಿ ಇನ್ನರ್‌ವೀಲ್ ಸಂಸ್ಥೆಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ಮೆಣಸಗೆರೆ ಕೆ.ಎನ್.ಧರಣಿ ಪುಟ್ಟೇಗೌಡ, ಕಾರ್ಯದರ್ಶಿಯಾಗಿ ಸವಿತಾ ಚಂದ್ರೇಶ್ ಆಯ್ಕೆಯಾದರೆ, ಎಡಿಟರ್ ಐಎಸ್‌ಒ ಜಯಲಕ್ಷ್ಮೀ ಪುಟ್ಟಸ್ವಾಮಿ, ಜಯಮ್ಮಲಕ್ಷ್ಮಣ, ಖಜಾಂಚಿ ಜಯಲಕ್ಷ್ಮೀ ವೆಂಕಟೇಗೌಡ ನೇಮಕ ಗೊಂಡರು. ನಂತರ ಅನುಪಮಾ ಸತೀಶ್, ಶ್ವೇತಾ, ಪವಿತ್ರಾ ಅವರು ಇನ್ನರ್‌ವೀಲ್ ಸಂಸ್ಥೆಯ ನೂತನ ಸದಸ್ಯತ್ವ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net