ಇನ್ನರ್ ವ್ಹೀಲ್ ಡಿಸ್ಟ್ರಿಕ್ಟ್ ಪದಾಧಿಕಾರಿಗಳ ಪದಗ್ರಹಣ

inner wheel
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇನ್ನರ್ ವ್ಹೀಲ್ ಡಿಸ್ಟ್ರಿಕ್ಟ್ 317ರ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ 51ನೇ ಡಿಸ್ಟ್ರಿಕ್ಟ್ ಅಸೆಂಬ್ಲಿ ಕಾರ್ಯಕ್ರಮ ಜೂನ್ 1ಮತ್ತು 2ರಂದು ಹುಬ್ಬಳ್ಳಿಯ ಹೋಟೆಲ್ ನವೀನದಲ್ಲಿ ಆಯೋಜಿಸಲಾಗಿದೆ ಎಂದು ಅಸೆಂಬ್ಲಿ ಕಾರ್ಯಕ್ರಮದ ಸಂಚಾಲಕಿ ಲತಾ ಜಮಖಂಡಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನರ್ ವ್ಹೀಲ್ ಡಿಸ್ಟ್ರಿಕ್ಟ್ 317 ಇತ್ತೀಚೆಗಷ್ಟೇ ಸುವರ್ಣ ಮಹೋತ್ಸವ ಆಚರಿಸಿಕೊಂಡಿದೆ. ಜೂ. 1ರಂದು ಬೆಳಗ್ಗೆ 10 ಗಂಟೆಗೆ ಡಿಸ್ಟ್ರಿಕ್ಟ್ 317ರ ಕಾರ್ಯಕಾರಿ ಮಂಡಳಿಯ ಸಭೆ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಬಿಜಿನೆಸ್ ಸೆಷನ್, ಸಂಜೆ 6.30ಕ್ಕೆ 2023- 24ರ ಅವಧಿಯ ಕಾರ್ಯಕಾರಿ ಮಂಡಳಿಯ ಮುಕ್ತಾಯ ಸಮಾರಂಭ ಹಾಗೂ ಪುರಸ್ಕಾರ ಕಾರ್ಯಕ್ರಮ, ರಾತ್ರಿ 8ರಿಂದ ಮನರಂಜನೆ ಹಾಗೂ ಕಲಾ ಸುಜಯ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ಜೂ. 2ರಂದು ಬೆಳಗ್ಗೆ 9 ಗಂಟೆಗೆ ಇನ್ನರ್ ವ್ಹೀಲ್ ಡಿಸ್ಟ್ರಿಕ್ಟ್ 317ರ 2024- 25ನೇ ಸಾಲಿನ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಜ್ಯೋತಿಕಿರಣ ಮೋಹನದಾಸ ಹಾಗೂ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ. ಇನ್ನರ್ ವ್ಹೀಲ್ ಕ್ಲಬ್ ಇಂಟರ್​ನ್ಯಾಷನಲ್ ಅಧ್ಯಕ್ಷೆ ಮಮತಾ ಗುಪ್ತಾ ಪದಗ್ರಹಣ ಸಮಾರಂಭ ನೆರವೇರಿಸುವರು ಎಂದರು.

ಈ ಎರಡು ದಿನ ಇನ್ನರ್ ವ್ಹೀಲ್ ಕ್ಲಬ್ ಆಫ್ ಹುಬ್ಬಳ್ಳಿ ವತಿಯಿಂದ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳ ಏರ್ಪಡಿಸಲಾಗಿದೆ. ಹ್ಯಾಂಡಿಕ್ರಾಫ್ಟ್ಸ್ , ಮನೆಯಲ್ಲಿಯೇ ತಯಾರಿಸಿದ ತಿಂಡಿ ತಿನಿಸುಗಳು, ಹ್ಯಾಂಡ್​ಲೂಮ್ ಗಾರ್ವೆಂಟ್ಸ್, ಆಯುರ್ವೆದ ಉತ್ಪನ್ನ, ಇತ್ಯಾದಿಗಳ 22 ಮಳಿಗೆಗಳನ್ನು ತೆರೆಯಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಅಸೆಂಬ್ಲಿ ಚೇರ್ಮನ್ ಪ್ರೊ. ವಿಜಯಲಕ್ಷ್ಮಿ ಕಟ್ಟಿಮಠ, ಹೇಮಾ ಹೊಸಮನಿ, ಲತಾ ಮೀರಜಕರ, ಪ್ರೇಮಲತಾ ಪಾಟೀಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net