ಬಾಹ್ಯಕ್ಕಿಂತ ಅಂತರಂಗ ಶುದ್ಧಿ ಮುಖ್ಯ

h1-sainagara
Published on

ಹುಬ್ಬಳ್ಳಿ: ನಿರ್ಮಲವಾದ ಮನಸ್ಸೇ ಮಡಿ, ಉಳಿದಿದ್ದೆಲ್ಲವೂ ಕಾಲ್ಮಡಿ ಎಂಬ ಸಂದೇಶವನ್ನು ನಾಗಲಿಂಗ ಸ್ವಾಮಿಗಳು ಸಾರಿದ್ದರು. ಇದು ನಮ್ಮ ಮನಸ್ಸಿಗಂಟಿದ ಕೊಳೆ ತೊಳೆದುಕೊಳ್ಳಬೇಕೆಂಬ ಸಂದೇಶ ಸಾರುತ್ತದೆ. ಬಾಹ್ಯಕ್ಕಿಂತ ಅಂತರಂಗ ಶುದ್ಧಿ ಮುಖ್ಯ ಎಂದು ಪ್ರವಚನಕಾರ ಗುರು ಮುಳಗುಂದ ಹೇಳಿದರು.

ಶ್ರಾವಣ ಮಾಸ ನಿಮಿತ್ತ ಇಲ್ಲಿಯ ಸಾಯಿನಗರದ ವಾಯುಪುತ್ರ ಬಡಾವಣೆಯ ಆಂಜನೇಯ ದೇವಸ್ಥಾನದಲ್ಲಿ ಒಂದು ತಿಂಗಳವರೆಗೆ ಏರ್ಪಡಿಸಿದ್ದ ನವಲಗುಂದದ ಅಜಾತ ಶ್ರೀ ನಾಗಲಿಂಗೇಶ್ವರರ ಪುರಾಣ ಪ್ರವಚನದ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅವರು ಮಾತನಾಡಿದರು.

ಲೌಕಿಕ ಜಗತ್ತಿಗೆ ತನ್ನ ಸಾಧನೆಗಳನ್ನು ತೋರಿ ಮರೆಯಾದ ಶ್ರೀ ನಾಗಲಿಂಗರು ಅವಧೂತ ಪರಂಪರೆಯ ಮಹಾನ್ ಸಾಧಕರು. ಕಾಳಿಕಾದೇವಿ ಆರಾಧಕರಾಗಿದ್ದರು. ಧರ್ಮ ಸಮನ್ವಯತೆಯನ್ನು ಲೋಕಕ್ಕೆ ಸಾರಿದರು ಎಂದು ಅಭಿಪ್ರಾಯಪಟ್ಟರು.

ಪ್ರಭು ಶಲವಡಿ, ಬಸಣ್ಣ ದರಕೊಪ್ಪ, ಮಡಿವಾಳಪ್ಪ ಮೊರಬದ, ರಾಚಪ್ಪ ಕಬನೂರ, ಬಸವರಾಜ ಹದ್ಲಿ, ಎಸ್.ಎಂ. ಅಂಗಡಿ, ಅಶೋಕ ಈರಗಾರ, ನಾರಾಯಣ ಔರಸಂಗ, ಚನ್ನಬಸಪ್ಪ ಧಾರವಾಡಶೆಟ್ರು, ಸುರೇಶ ಬಡಿಗೇರ, ಜಿ.ವಿ. ಪಾಟೀಲ, ಡಿ.ಟಿ.ದುಂದೂರ, ಎಂ.ವಿ. ಮಡಿವಾಳರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net