ಭೋವಿವಡ್ಡರ ಸಮುದಾಯಕ್ಕೆ ಅನ್ಯಾಯ

15gkk1
Published on

ಗೋಕಾಕ: ಭೋವಿವಡ್ಡರ ಸಮುದಾಯಕ್ಕೆ ಶೇ.5 ಒಳ ಮಿಸಲಾತಿ ನೀಡಿರುವುದು ಅನ್ಯಾಯ ಎಂದು ತಾಲೂಕು ಭೋವಿ ಸೋಷಿಯಲ್ ವೆಲ್ಫೇರ್ ಸೊಸೈಟಿ ವತಿಯಿಂದ ಸೋಮವಾರ ತಹಸೀಲ್ದಾರ್ ಡಾ.ಮೋಹನ ಭಸ್ಮೆಗೆ ಮನವಿ ಸಲ್ಲಿಸಲಾಯಿತು.

ಸಮುದಾಯದಲ್ಲಿ 101 ಹಿಂದುಳಿದ ಜಾತಿಗಳಿದ್ದು, ಅದರಲ್ಲಿ 63 ಜಾತಿಗಳಿಗೆ ಶೇ.5 ಒಳಮಿಸಲಾತಿ ನೀಡಿದ್ದು ಸರಿಯಲ್ಲ. ಇದನ್ನು ರದ್ದು ಪಡಿಸಿ, ಪ್ರತ್ಯೇಕ ಒಳಮಿಸಲಾತಿ ಘೋಷಿಸಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ತಾಲೂಕು ಅಧ್ಯಕ್ಷ ಭರಮಣ್ಣ ಗಾಡಿವಡ್ಡರ, ಎಲ್.ಜಿ.ಗಾಡಿವಡ್ಡರ, ಗೋವಿಂದ ಗಾಡಿವಡ್ಡರ, ಹನುಮಂತ ಮನುವಡ್ಡರ, ಮೋಹನ ಮನುವಡ್ಡರ, ಕೆಂಪಣ್ಣ ಮನುವಡ್ಡರ, ಶೆಟ್ಟೆಪ್ಪ ಮನುವಡ್ಡರ, ಪರಶುರಾಮ ಗಾಡಿವಡ್ಡರ, ಆನಂದ ಮನುವಡ್ಡರ, ಪವನ ಮಹಾಲಿಂಗಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net