ಓಲೈಕೆಯಿಂದ ರೈತರಿಗೆ ಅನ್ಯಾಯ: ಶಾಸಕ ಚೆನ್ನಿ

Channabasappa
Published on

ಶಿವಮೊಗ್ಗ: ರಾಜ್ಯ ಸರ್ಕಾರ ವಕ್ಫ್ ಮಂಡಳಿ ಮೂಲಕ ಕರ್ನಾಟಕವನ್ನು ಮುಸ್ಲಿಂ ರಾಜ್ಯವನ್ನಾಗಿ ಮಾಡಲು ಮುಂದಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ವಾಗ್ದಾಳಿ ನಡೆಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ನೋಟಿಸ್ ನೀಡಿದ ನಡೆಯನ್ನು ತೀವ್ರವಾಗಿ ಖಂಡಿಸಿದರು. ರೈತರ ಜಮೀನು ಕಸಿದುಕೊಂಡು ವಕ್ಫ್ ಮಂಡಳಿಗೆ ನೀಡುವ ಪ್ರಯತ್ನ ಇದಾಗಿದೆ ಎಂದು ದೂರಿದರು.

ಶಿವಮೊಗ್ಗದಲ್ಲಿ ಶಿವಪ್ಪನಾಯಕನ ವಂಶಸ್ಥರ ಸಮಾಧಿ ಜಾಗವನ್ನು ವಕ್ಫ್ ಮಂಡಳಿಗೆ ಸೇರಿಸುವ ಹುನ್ನಾರ ನಡೆದಿದೆ. ಈಗಾಗಲೇ ಈದ್ಗಾ ಮೈದಾನ ನಮ್ಮದು ಎಂದು ಹೇಳುತ್ತಿದ್ದಾರೆ. ಆದರೆ ಈದ್ಗಾ ಮೈದಾನ ನಗರ ಪಾಲಿಕೆ ಹೆಸರಿನಲ್ಲಿದೆ. ಆಸ್ತಿ ಸಂರಕ್ಷಣೆ ಮಾಡಲು ಆಗದಿರುವ ಸರ್ಕಾರವಿದು. ಸಚಿವ ಜಮೀರ್ ಅಹಮದ್ ತನ್ನ ಬಂಗಲೆಯನ್ನು ವಕ್ಫ್‌ಗೆ ಬರೆದುಕೊಡಲಿ ಎಂದು ಕಿಡಿಕಾರಿದ ಚನ್ನಬಸಪ್ಪ, ವಕ್ಫ್ ರಾಜ್ಯವನ್ನಾಗಿ ಮಾಡಲು ಹಿಂದು ಸಮಾಜ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಮರು ಮಾಡಬಾರದ ಕೆಲಸಕ್ಕೆ ಕೈಹಾಕುತ್ತಿದ್ದಾರೆ. ಮುಸಲ್ಮಾನ್ ಲ್ಯಾಂಡ್ ಮಾಫಿಯಾವನ್ನು ವಕ್ಫ್ ಮೂಲಕ ಕಾಂಗ್ರೆಸ್ ನಿಯಂತ್ರಿಸುತ್ತಿದೆ. ರೈತರಿಗೆ ನೋಟಿಸ್ ಕೊಟ್ಟರೂ ಸರ್ಕಾರ ಏನು ಮಾಡುತ್ತಿದೆ? ಮುಖ್ಯಮಂತ್ರಿಗಳೇ, ಮುಸ್ಲಿಮರ ಓಲೈಕೆಯನ್ನು ಎಲ್ಲಿಯವರೆಗೂ ಮುಂದುವರಿಸುತ್ತೀರಿ ಎಂದು ಪ್ರಶ್ನಿಸಿದರು. ಸರ್ಕಾರದಿಂದ ಒಂದು ಕಡೆ ಮುಸ್ಲಿಂ ಓಲೈಕೆಯಾದರೆ ಮತ್ತೊಂದು ಕಡೆ ರೈತರಿಗೆ ದ್ರೋಹವಾಗುತ್ತಿದೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net