

ನೆಲಮಂಗಲ : ತೈಲ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಮುಡಾ, ವಾಲ್ಮೀಕಿ ನಿಗಮದ ಹಗರಣಗಳೇ ಕಾಂಗ್ರೆಸ್ ನೇತೃತ್ವದ ಸಾಧನೆ ಎಂದು ಬಿಜೆಪಿ ರಾಜ್ಯ ವಕ್ತಾರ ದೊಡ್ಡೇರಿ ವೆಂಕಟೇಶ್ ಜರಿದರು.
ನಗರಸಭೆ ವ್ಯಾಪ್ತಿಯ ಅರಿಶಿಣಕುಂಟೆಯ ಬಳಿ ಮಂಗಳವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಎರಡು ವರ್ಷದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಹಗರಣ ಹೆಚ್ಚಾಗಿವೆ. ಪರಿಶಿಷ್ಟ ಜಾತಿ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ 52 ಸಾವಿರ ಕೋಟಿ ರೂ.ನಲ್ಲಿ 40 ಸಾವಿರ ಕೋಟಿ ಹಣವನ್ನು ಸರ್ಕಾರ ಗ್ಯಾರಂಟಿಗೆ ಬಳಸಿಕೊಂಡು ಪರಿಶಿಷ್ಟ ಜಾತಿ ಪಂಗಡದವರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ದಲಿತರಿಗೆ ಅನ್ಯಾಯ ಮಾಡುತ್ತಿದೆ ಎಂದರು.
ಮೈಸೂರಿನ ಮೂಡಾ ಹಗರಣ ಸೇರಿ 184 ಕೋಟಿ ರೂ. ವಾಲ್ಮೀಕಿ ಹಗರಣ, ಅಗತ್ಯ ವಸ್ತುಗಳ ಬೆಲೆ ಏರಿಕೆ, ತೆರಿಗೆ ಏರಿಕೆ, ಸುಪ್ರೀಂ ಕೋರ್ಟ್ ಆದೇಶ ಉಲ್ಲಂಸಿ ಧರ್ಮ ಆಧಾರಿತ ಮೀಸಲು ಜಾರಿ ಸೇರಿ ಸಾಕಷ್ಟು ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ತೊಡಗಿದೆ. ಕೈ ಅವಧಿಯಲ್ಲಿ 2 ಸಾವಿರ ರೈತರ ಆತ್ಮಹತ್ಯೆ, 1 ಸಾವಿರಕ್ಕೂ ಹೆಚ್ಚು ಬಾಣಂತಿಯರ ಸಾವು, 2,400ಕ್ಕೂ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯ, 1.82 ಲಕ್ಷ ಕ್ರಿಮಿನಲ್ ಪ್ರಕರಣ ಸೇರಿ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ಮತ್ತು ಹತ್ಯೆ ಹೆಚ್ಚಳವಾಗಿದೆ. ಜನತೆಗೆ ಅಭಿವೃದ್ಧಿ ಹೆಸರಿನಲ್ಲಿ ಕಾಂಗ್ರೆಸ್ ದ್ರೋಹ ಮಾಡುತ್ತಿದೆ ಎಂದು ಆಪಾದಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ಮಾತನಾಡಿ, ಸಾಧನೆ ಸಮಾವೇಶದ ಹೆಸರಿನಲ್ಲಿ ಜನಸಾಮಾನ್ಯರ ತೆರಿಗೆ ಹಣವನ್ನು ಹಾಳು ಮಾಡುತ್ತಿದ್ದು, ಇದರಿಂದ ರಾಜ್ಯ ದಿವಾಳಿಯಾಗುತ್ತಿದೆ.
ವಿರೋಧ ಪಕ್ಷದ ಶಾಸಕರು ಸರ್ಕಾರದ ಬಳಿ ಅನುದಾನಕ್ಕಾಗಿ ಭಿೆ ಬೇಡುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಎರಡು ವರ್ಷದ ಸಾಧನೆ ಏನೆಂದು ಜನಸಾಮಾನ್ಯರಿಗೆ ತಿಳಿದಿದೆ. ಜತೆಗೆ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಒಳ ಚರಂಡಿ, ಕುಡಿಯುವ ನೀರು, ಬಸ್ ನಿಲ್ದಾಣ, ಕೆರೆಗಳ ಅಭಿವೃದ್ಧಿಯಾಗಿಲ್ಲ. ತಾಲೂಕಿನಲ್ಲಿ ಬಾರ್ಗಳ ಸಂಖ್ಯೆ ಹೆಚ್ಚಾಗಿದ್ದು, ಕ್ಷೇತ್ರ ಅಭಿವೃದ್ಧಿಯಾಗದೇ ಬಾರ್ಗಳು ಅಭಿವೃದ್ಧಿಯಾಗುತ್ತಿವೆ ಎಂದರು.
ನೆ.ಯೋ.ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಮಲ್ಲಯ್ಯ, ಮಾಜಿ ಸದಸ್ಯ ರಮೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್, ಬಿಜೆಪಿ ರಾಜ್ಯ ಮಾಧ್ಯಮ ಸಹಸಂಚಾಲಕ ಶ್ರೀನಾಥ್, ಬಿಜೆಪಿ ನಗರ ಮಾಜಿ ಅಧ್ಯಕ್ಷ ರವಿ, ಎಸ್ಟಿ ಮೋರ್ಚಾ ತಾಲೂಕು ಅಧ್ಯಕ್ಷ ಕೆಂಪರಾಮಯ್ಯ, ಅರಿಶಿನಕುಂಟೆ ಶಕ್ತಿಕೇಂದ್ರ ಅಧ್ಯಕ್ಷ ಉಮೇಶ್, ಮುಖಂಡ ಸಪ್ತಗಿರಿ ಶಂಕರ್ನಾಯಕ್ ಅಂಜನಮೂರ್ತಿ, ಸಿದ್ದು, ನಾಗರಾಜು, ಪ್ರಕಾಶ್, ಶಾಂತಕುಮಾರಿ, ಗಿರೀಶ್ ಇದ್ದರು.