ಒಳ ಮೀಸಲಾತಿಯಿಂದ 99 ಜನಾಂಗಕ್ಕೆ ಅನ್ಯಾಯ

Injustice to 99 castes by internal reservation
ಬಸವನಬಾಗೇವಾಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಶಾಂತು ರಾಠೋಡ, ಸಿದ್ರಾಮ ಪ್ರಾತೋಟಿ ಮಾತನಾಡಿದರು. ಡಾ.ಬಸವರಾಜ ಚವ್ಹಾಣ, ಶಿವಾಜಿ ರಾಠೋಡ ಇತರರಿದ್ದರು.
Published on

ಬಸವನಬಾಗೇವಾಡಿ: ರಾಜ್ಯದಲ್ಲಿ ಒಳ ಮೀಸಲಾತಿ ನೀಡುವುದರಿಂದ 99 ವಿವಿಧ ಸಮಾಜದ ಜನರಿಗೆ ಅನ್ಯಾಯವಾಗುತ್ತದೆ ಎಂದು ರಾಷ್ಟ್ರೀಯ ಗೋರ ಮಳಾವ್​ ಬಂಜಾರ ಸಮಾಜದ ತಾಲೂಕಾಧ್ಯ ಶಾಂತು ರಾಠೋಡ, ಭೋವಿ ಸಮಾಜದ ಹಿರಿಯ ಮುಖಂಡ ಸಿದ್ರಾಮ ಪ್ರಾತೋಟಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಅವರು ಮಾತನಾಡಿ, ಸುಪ್ರೀಂಕೋರ್ಟ್​ನ ಸಿಜೆಐ ಚಂದ್ರಚೂಡ ನೇತೃತ್ವದ 7 ಸದಸ್ಯರ ಪೀಠ ಒಳಮೀಸಲಾತಿ ನೀಡುವಂತೆ ಪ್ರಸ್ತಾವವನ್ನು ಎತ್ತಿಹಿಡಿದಿದ್ದಿ, ಇದರಿಂದ ಬಂಜಾರ, ಕೊರವ, ಕೊರಚ, ಭೋವಿ ಸೇರಿದಂತೆ 99 ಸಮಾಜದ ಭಾಂದವರಿಗೆ ಈ ಒಳಮೀಸಲಾತಿಯಿಂದ ಅನ್ಯಾಯವಾಗುತ್ತದೆ. ಆದ್ದರಿಂದ ರಾಜ್ಯಸರ್ಕಾರ ತಣ ಈ ಒಳಮೀಸಲಾತಿ ಕೈಬಿಡಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರ ಜಾತಿ ಜನಗಣತಿ ನಡೆಸುವ ಜೊತಗೆ ಸಮಗ್ರ ಅಧ್ಯಯನ ಮಾಡಿ ಯಾವ ಯಾವ ಜಾತಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಬಗ್ಗೆ ಸರ್ವೆ ಮಾಡಿ ನಂತರ ಒಳಮೀಸಲಾತಿ ನೀಡುವುದು ಸೂಕ್ತ ಎಂದು ಹೇಳಿದರು.

ಡಾ.ಬಸವರಾಜ ಚವ್ಹಾಣ, ಶಿವಾಜಿ ರಾಠೋಡ, ಬಾಬು ಚವ್ಹಾಣ, ಬಾಳು ರಾಠೋಡ, ಆನಂದ ಲಮಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net