ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಿ: ಪೊಲೀಸ್ ತರಬೇತಿ ಶಾಲೆ ಪ್ರಾಚಾರ್ಯ ಪಾಪಣ್ಣ ಕಿವಿಮಾತು

AML SAMAROPA 29
Published on

ಐಮಂಗಲ (ಹಿರಿಯೂರು ತಾಲೂಕು): ತರಬೇತಿ ಅವಧಿಯಲ್ಲಿ ಪಡೆದ ಮಾಹಿತಿಯನ್ನು ಉದ್ಯೋಗದಲ್ಲಿ ಬಳಸಿಕೊಂಡು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಲು ಮುಂದಾಗಬೇಕೆಂದು ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯ ಹಾಗೂ ಎಸ್ಪಿ ಪಿ.ಪಾಪಣ್ಣ ಹೇಳಿದರು.

ಪೊಲೀಸ್ ತರಬೇತಿ ಶಾಲೆಯಲ್ಲಿ ಎಎಸ್‌ಐ ಮತ್ತು ಮುಖ್ಯಪೇದೆಗಳ ಪುನರ್ಮನನ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿ, ವಿಶೇಷ ಉಪನ್ಯಾಸ, ಕಾರ್ಯಾಗಾರದಿಂದ ವೃತ್ತಿ ಜೀವನಕ್ಕೆ ಇನ್ನಷ್ಟು ಅನುಕೂಲವಾಗಲಿದೆ ಎಂದರು.

ತರಬೇತಿಯಲ್ಲಿ ಪಾಲ್ಗೊಂಡವರಿಗೆ ಪ್ರಮಾಣ ಪತ್ರ ನೀಡಲಾಯಿತು. ವೈಎಸ್‌ಪಿ ಎಸ್.ಎಸ್.ಗಣೇಶ್, ಆರ್‌ಪಿಐ ಬಿ.ಪರಶುರಾಮ್, ಆರ್‌ಎಸ್‌ಐ ಮಂಜುನಾಥ್, ಪಿಎಸ್‌ಐ ಮಂಜುನಾಥ್ ಲಿಂಗಾರೆಡ್ಡಿ, ಮೋಹನ್, ವಕೀಲ ಉಮೇಶ್, ಸಿಪಿಐ ನಾಗರಾಜು, ರಾಘವೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net