ಟ್ರೈಲರ್ ಮಗುಚಿ ಕಾರ್ಮಿಕರಿಗೆ ಗಾಯ

26blrp4
Published on

ಬೇಲೂರು: ಕಾಫಿ ತೋಟದ ಕೆಲಸಕ್ಕೆಂದು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಜೀಪ್‌ನ ಟ್ರೈಲರ್ ಮಗುಚಿ ಬಿದ್ದು ಕಾರ್ಮಿಕರು ಗಾಯಗೊಂಡಿದ್ದಾರೆ.

ತಾಲೂಕಿನ ಮುರೇಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡಲು ಜೀಪ್‌ನ ಟ್ರೈಲರ್‌ನಲ್ಲಿ ತೆರಳುತ್ತಿದ್ದಾಗ ಬಿಟ್ಟೇಶ್ವರ ಗ್ರಾಮದ ಸಮೀಪದ ತಿರುವಿನಲ್ಲಿ ಟ್ರೈಲರ್ ಉರುಳಿ ಬಿದ್ದ ಪರಿಣಾಮ 7 ಜನರ ಪೈಕಿ ಕೆಲವರಿಗೆ ಗಂಬೀರ ಗಾಯಗಳಾದರೆ ಮತ್ತೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗಂಭೀರವಾಗಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಹಾಸನ ಹಾಗೂ ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೆ, ಉಳಿದವರನ್ನು ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net