ಕಾರು-ಬೈಕ್ ಅಪಘಾತದಲ್ಲಿ ಸವಾರರಿಗೆ ಗಾಯ

Accident
Published on

ವಿಟ್ಲ: ಸಾಲೆತ್ತೂರು-ವಿಟ್ಲ ರಸ್ತೆಯ ಕೊಡುಂಗಾಯಿಯಲ್ಲಿ ಆಲ್ಟೋ ಕಾರು ಮತ್ತು ಬೈಕ್ ನಡುವೆ ಅಪಘಾತವಾಗಿ ಬೈಕ್ ಸವಾರರಾದ ಕಡಂಬು ನಿವಾಸಿಗಳಾದ ಸಿನಾನ್ ಮತ್ತು ಫೈಜಲ್ ಎಂಬುವರು ಗಂಭೀರ ಗಾಯಗೊಂಡಿದ್ದಾರೆ.

ಡಿಕ್ಕಿ ರಭಸಕ್ಕೆ ಬೈಕ್ ಸವಾರ ಕಾರಿನ ಮೇಲೆ ಹಾರಿದ್ದು, ತಲೆ ಕಾರಿನ ಗಾಜಿಗೆ ಬಡಿದು ಗಾಯವಾಗಿದೆ. ಕಾರು ಚಾಲಕ ಸುಳ್ಯ ಸಮೀಪದ ಕನಕಮಜಲು ನಿವಾಸಿ ಗೋಪಾಲಕೃಷ್ಣ ಅವರು ಪುತ್ರಿಯನ್ನು ಮುಡಿಪು ನವೋದಯ ವಸತಿ ಶಾಲೆಗೆ ದಾಖಲಿಸಿ ವಾಪಾಸಾಗುತ್ತಿದ್ದರು. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net