

ಸಿಂಧನೂರು: ಕಳೆದ ಎರಡು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ತಾಲೂಕಿನ ತುರ್ವಿಹಾಳ ಹೊರ ವಲಯದಲ್ಲಿರುವ ಡಾ.ಅಂಬೇಡ್ಕರ್ ವಸತಿ ನಿಲಯದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಶುಕ್ರವಾರ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮಸ್ಕಿ ತಾಲೂಕು ದೇಸಾಯಿ ಭೋಗಾಪುರ ತಾಂಡಾದ ಅಭಿಷೇಕ ಚವ್ಹಾಣ್ (16) ಮೃತ. ತುರ್ವಿಹಾಳ ಹೊರವಲಯದ ಕುಷ್ಟಗಿ ರಸ್ತೆಯಲ್ಲಿ ಆ.13ರಂದು ರನ್ನಿಂಗ್ ಮಾಡುವಾಗ ಬೊಲೆರೋ ವಾಹನ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಇವರ ಪೈಕಿ ಅಭಿಷೇಕ ಚವ್ಹಾಣ್ ತೀವ್ರ ಗಾಯಗೊಂಡಿದ್ದರಿಂದ ಹುಬ್ಬಳ್ಳಿ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸಲಿಲ್ಲ.
ವಸತಿ ನಿಲಯ ಸ್ಥಳಾಂತರ: ಅಪಘಾತಕ್ಕೀಡಾಗಿ ವಿದ್ಯಾರ್ಥಿಗಳು ಗಾಯಗೊಂಡ ಹಿನ್ನೆಲೆಯಲ್ಲಿ ವಸತಿ ನಿಲಯದ ಪ್ರಾಚಾರ್ಯ ಸೇರಿ ಮೂವರನ್ನು ಅಮಾನತು ಮಾಡಲಾಗಿತ್ತು. ಈಗ ಮಕ್ಕಳ ಹಿತ ದೃಷ್ಟಿಯಿಂದ ಹಾಸ್ಟೆಲ್ ಅನ್ನು ಉಮಲೂಟಿ ಮುರಾರ್ಜಿ ವಸತಿ ನಿಲಯಕ್ಕೆ ಸ್ಥಳಾಂತರಿಸಲಾಗಿದೆ.