ಗಾಯಗೊಂಡಿದ್ದ ಕೆಂಚೇಗೌಡ ಸಾವು

15hgr2
ಕೆಂಚೇಗೌಡ
Published on

ಹಲಗೂರು: ಸಮೀಪದ ದೇವಿರಹಳ್ಳಿ ಗ್ರಾಮದಲ್ಲಿ ಕಂಬ ಏರಿ ಬೀದಿದೀಪ ಅಳವಡಿಸುವಾಗ ವಿದ್ಯುತ್ ಸ್ಪರ್ಶಿಸಿ, ಕೆಳಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.

ಹಲಗೂರು ಸಮೀಪದ ಕೆಂಪಯ್ಯನದೊಡ್ಡಿ ಗ್ರಾಮ ನಿವಾಸಿ ಕೆಂಚೇಗೌಡ (62) ಮೃತರು.

ದಳವಾಯಿ ಕೋಡಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹತ್ತು ವರ್ಷಗಳಿಂದ ಅಧ್ಯಕ್ಷ ಮತ್ತು ಪಿಡಿಒ ಅವರ ಮೌಖಿಕ ಆದೇಶದ ಮೇರೆಗೆ ಗುತ್ತಿಗೆ ಅಧಾರದಲ್ಲಿ ವಿದ್ಯುತ್ ಬಲ್ಬ್ ಅಳವಡಿಕೆ ಕೆಲಸ ಮಾಡುತ್ತಿದ್ದರು. ಮಂಗಳವಾರ ಬೆಳಗ್ಗೆ ವಾಟರ್‌ಮನ್ ಬಸವಲಿಂಗೇಗೌಡ ಅವರು ಕೆಂಚೇಗೌಡ ಅವರಿಗೆ ಕರೆ ಮಾಡಿ, ಬಲ್ಬ್ ಅಳವಡಿಸಲು ದೇವಿರಹಳ್ಳಿ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾರೆ. ವಿದ್ಯುತ್ ಕಂಬ ಏರಿ ಬೀದಿದೀಪ ಅಳವಡಿಸುವಾಗ ವಿದ್ಯುತ್ ಸ್ಪರ್ಶಿಸಿ, ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ತೀವ್ರ ಗಾಯಗೊಂಡ ಕೆಂಚೇಗೌಡ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net