

ಹುಬ್ಬಳ್ಳಿ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾದ ಘಟನೆ ತಾಲೂಕಿನ ಕಿರೇಸೂರು ಗ್ರಾಮದ ಬಳಿ ಶನಿವಾರ ಸಂಭವಿಸಿದೆ.
ಹುಬ್ಬಳ್ಳಿಯಲ್ಲಿ ಮದುವೆ ಜವಳಿ ಖರೀದಿಸಿ ಗೊಬ್ಬರಗುಂಪಿ ಕಡೆಗೆ ಹೊರಟಿದ್ದ ಕಾರಿಗೆ, ಕೂಡಲಗೇರಿಯಿಂದ ಶಿಗ್ಗಾಂವಿಯತ್ತ ಹೊರಟಿದ್ದ ಕಾರು ಡಿಕ್ಕಿ ಹೊಡೆದಿದೆ. ಮದುವೆ ಜವಳಿಗೆ ಬಂದಿದ್ದ ಕಲ್ಲನಗೌಡ (57), ರತ್ನಾ (50), ಬಸನಗೌಡ (15), ಬಸನಗೌಡ (65), ನಾಗನಗೌಡ (29), ಬಸವರಾಜ ಎಂಬಾತರಿಗೆ ಗಾಯಗಳಾಗಿವೆ.
ಮತ್ತೊಂದು ಕಾರಿನಲ್ಲಿದ್ದ ಸಿದ್ದಪ್ಪ ಅರಗೋಳ, ಚಂದ್ರು ಪಾಟೀಲ್ ಎಂಬುವವರಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ಕೆಎಂಸಿಆರ್‌ಐನಲ್ಲಿ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.