ಗಾಯಗೊಂಡಿದ್ದ ಬಾಲಕನೂ ಮೃತ್ಯು

web UDUPi
Published on


ಪಡುಬಿದ್ರಿ(ಉಡುಪಿ): ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಮಹಾಲಕ್ಷ್ಮಿದೇವಸ್ಥಾನದ ಮುಂಭಾಗದಲ್ಲಿ ಬುಧವಾರ ಲಾರಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಬೆಳಗಾವಿ ಹುಕ್ಕೇರಿ ಮೂಲದ ಪ್ರಭಾಕರ್ ಶಂಕರ್ ಪೋದ್ದಾರ್ ಎಂಬುವರ ಪುತ್ರ ಸಮರ್ಥ್ ಪೋದ್ದಾರ್(13)ಕೂಡ ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾನೆ.

ಅಪಘಾತದಿಂದ ಪ್ರಭಾಕರ್ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದರು. ಸಮರ್ಥ್‌ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಆತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಕುತ್ಯಾರು ಆನೆಗುಂದಿ ಸಂಸ್ಥಾನದ ವಿದ್ಯಾಸಂಸ್ಥೆ 7ನೇ ತರಗತಿ ವಿದ್ಯಾರ್ಥಿಯಾಗಿದ್ದ ಸಮರ್ಥ್ ರಜೆ ಮುಗಿಸಿ ತಂದೆಯೊಂದಿಗೆ ಬೆಳಗಾವಿಯಿಂದ ಉಚ್ಚಿಲಕ್ಕೆ ಬಸ್‌ನಲ್ಲಿ ಆಗಮಿಸಿದ್ದ.

ಉಚ್ಚಿಲ ಬಳಿ ರಸ್ತೆ ಬದಿ ನಿಂತಿದ್ದ ವೇಳೆ ಉಡುಪಿಯಿಂದ ಮಂಗಳೂರಿನತ್ತ ಸಾಗುತ್ತಿದ್ದ ಲಾರಿ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net