ಚಿಂತಾಮಣಿ: ಬೆಂಗಳೂರು-ಚಿಂತಾಮಣಿ ಹೆದ್ದಾರಿಯ ಕೊಂಗನಹಳ್ಳಿ ಬಳಿ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ವ್ಯಾನ್‌ಗೆ ಬೈಕ್ ಸವಾರ ಡಿಕ್ಕಿ ಹೊಡೆದಿದ್ದರಿಂದ ದಿಚಕ್ರ ವಾಹನ ಸವಾರ ತೀವ್ರವಾಗಿ ಗಾಯಗೊಂಡಿದ್ದಾನೆ.
ನಗರದ ತಾಲೂಕು ಭೂಮಾಪನ ಇಲಾಖೆ ಸರ್ವೇಯರ್ ವಿನೋದ್(30) ಗಾಯಗೊಂಡವ. ಶುಕ್ರವಾರ ರಾತ್ರಿ ಎಚ್.ಕ್ರಾಸ್‌ನಿಂದ ಚಿಂತಾಮಣಿಗೆ ಬರುತ್ತಿದ್ದಾಗ ರಸ್ತೆ ಬದಿ ಕೆಟ್ಟು ನಿಂತಿದ್ದ ವ್ಯಾನ್ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ. ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆಸ್ಪತ್ರೆಗೆ ರವಾನಿಸಲಾಗಿದೆ.