

ಹುಬ್ಬಳ್ಳಿ: ಕೋಟಿಲಿಂಗನಗರ ಬಡಾವಣೆಯ ಮಲ್ಲಿಕಾರ್ಜುನ ಉದ್ಯಾನದಲ್ಲಿ ಸ್ವರ್ಣಾ ಗ್ರುಪ್ ಆಫ್ ಕಂಪನೀಸ್ ಹಾಗೂ ವಸುಂಧರಾ ಫೌಂಡೇಷನ್ ವತಿಯಿಂದ ರಾಶಿ ವನ ನಿರ್ವಣಕ್ಕೆ ಚಾಲನೆ ನೀಡಲಾಯಿತು.
ಚಾಲನೆ ನೀಡಿದ ಶಾಸಕ ಮಹೇಶ ಟೆಂಗಿನಕಾಯಿ ಮುಂಬರುವ ದಿನಗಳಲ್ಲಿ ಹುಬ್ಬಳ್ಳಿ ಮಹಾನಗರವನ್ನು ಸ್ವಚ್ಛ ಹಾಗೂ ಹಸಿರು ನಗರವನ್ನಾಗಿ ಮಾಡಲು ಎಲ್ಲರ ಸಹಕಾರದೊಂದಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ಸ್ವರ್ಣಾ ಗ್ರುಪ್ ಆಫ್ ಕಂಪನೀಸ್ನ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಈ ಉದ್ಯಾನದಲ್ಲಿ ನೆಟ್ಟ ಸಸಿಗಳು ಬೆಳೆದು ನಿಂತಿರುವುದನ್ನು ನೋಡಿದರೆ ಸಂತಸವಾಗುತ್ತಿದೆ. ವಸುಂಧರಾ ಫೌಂಡೇಷನ್ ಕಾರ್ಯ ಶ್ಲಾಘನೀಯವಾದುದು ಎಂದರು.
ಪಾಲಿಕೆ ಸದಸ್ಯರಾದ ಚೇತನ ಹೀರೆಕೆರೂರ, ಪ್ರಮುಖರಾದ ಸದಾಶಿವ ಮಠದ, ಪ್ರೇಮನಾಥ ಚಿಕ್ಕತುಂಬಳ, ವಿಶ್ವನಾಥ ಹಿರೇಮಠ, ವಸುಂಧರಾ ಫೌಂಡೇಷನ್ ಅಧ್ಯಕ್ಷ ಮೇಘರಾಜ ಕೆರೂರ, ವಿನಾಯಕ ನಾಯ್ಕರ್, ಪ್ರದೀಪ ಬಡಿಗೇರ, ನಾಗರಾಜ ಎಂಡಿಗೇರಿ ಇತರರು ಇದ್ದರು. ರಾಶಿ ವನದ ಸಸಿಗಳಾದ ಅರಳಿ, ಆಲ, ಬನ್ನಿ, ಬೀಟೆ, ಸಪ್ತಪರಣಿ, ರಕ್ತ ಚಂದನ, ಹಲಸು, ಮಾವು ,ಕಾಸರಕ, ಬಕೋಳ, ಪಾದರಿ, ಮುತ್ತಲು ಸಸಿಗಳನ್ನು ನೆಡಲಾಯಿತು.