

ಕುಂದಾಪುರ: ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಸಂಸ್ಥೆ 13ನೇ ವರ್ಷದ ಇನಿದನಿ ಕಾರ್ಯಕ್ರಮ ಭಾನುವಾರ ಸಂಜೆ ಕುಂದಾಪುರದ ಬೋರ್ಡ್ ಹೈಸ್ಕೂಲ್ ವಠಾರದಲ್ಲಿ ನಡೆಯಿತು.
ಸೇರಿದ್ದ ಸಾವಿರಾರು ಮಂದಿಗೆ ಹಳೇ ಕನ್ನಡ ಚಿತ್ರದ ಮಧುರ ಗೀತೆಗಳ ಮಾರ್ದನಿಯ ಇನಿದನಿ ಸಂಗೀತದ ರಸದೌತಣ ನೀಡಿತು.
ಕಾರ್ಯಕ್ರಮದಲ್ಲಿ ಪ್ರಮುಖ ಹಾಡುಗಾರರಾಗಿ ಬೆಂಗಳೂರಿನ ರಮೇಶ್ಚಂದ್ರ, ಶ್ರುತಿ ಭಿಡೆ, ಮೋಹನಕೃಷ್ಣ, ಮಾಲಿನಿ ಕೇಶವ ಪ್ರಸಾದ್, ಮಂಗಳೂರಿನ ವೈ.ಎನ್.ರವೀಂದ್ರ, ಕುಂದಾಪುರದ ಅಶೋಕ್ ಸಾರಂಗ್, ಧಾರಿಣಿ, ಪ್ರಾಪ್ತಿ, ಕಮಲ್ ಕಿಶೋರ್ ತಮ್ಮ ಹಾಡಿನ ಮೂಲಕ ಸಂಗೀತ ಲೋಕದ ರಸಸೃಷ್ಟಿಗೆ ಕಾರಣರಾದರು.
ವಾದ್ಯವೃಂದದಲ್ಲಿ ರಾಜಗೋಪಾಲ್ ಆಚಾರ್ಯ, ದೀಪಕ್ ಶಿವಮೊಗ್ಗ, ರಾಜೇಶ್ ಭಾಗವತ್, ಭಾಸ್ಕರ ಕುಂಬ್ಳೆ, ಗಣೇಶ್ ನವಗಿರಿ, ವಾಮನ ಕುಮಾರ್ ಕಾರ್ಕಳ, ಕೇರಳದ ಶಿಜಿಮೂನ್, ದೀಪಕ್ ಬೆಂಗಳೂರು, ಸುಮುಖ್ ಆಚಾರ್ಯ, ಅಭಿಷೇಕ್, ಟೋನಿ ಡಿಸಿಲ್ವಾ ಭಾಗವಹಿಸಿ ಸಾಥ್ ನೀಡಿದರು. ವಿ.ಕೆ.ವಿ.ರಮಣ್ ಮೂಡುಬಿದಿರೆ ನಿರ್ವಹಿಸಿದರು.
ಸಂಸ್ಥೆ ಅಧ್ಯಕ್ಷ ಕಿಶೋರ್ ಕುಮಾರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಂಜುನಾಥ ಶೆಟ್ಟಿ, ಶಿವಾನಂದ ಶೆಟ್ಟಿ, ಉದಯ ಶೇಟ್, ಸಂಪತ್ ಕುಮಾರ್ ಶೆಟ್ಟಿ, ವೀಣಾ ಮಾರ್ಕೋಡು, ಸುಧೀರ ಕುಮಾರ್ ಶೆಟ್ಟಿ, ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಲಿಯಾಕತ್ ಅಲಿ, ರಾಮಕೃಷ್ಣ ಬಿಜೂರು, ಗೋಕುಲ್ ಶೆಟ್ಟಿ, ಕಲಾಕ್ಷೇತ್ರ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.