ಮೂಲಸೌಕರ್ಯ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ

1
Published on

ಕಾಗವಾಡ: ಪಟ್ಟಣದ ವಿದ್ಯಾನಗರಕ್ಕೆ ಒಳಚರಂಡಿ, ರಸ್ತೆ, ಬೀದಿ ದೀಪ ಸೇರಿ ಮೂಲ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ, ಸ್ಥಳೀಯ ನಿವಾಸಿಗಳು ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ತಹಸೀಲ್ದಾರ್ ಕಾರ್ಯಾಲಯದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ವಕೀಲ ರಾಹುಲ ಕಟಗೇರಿ ಮಾತನಾಡಿ, ಮಲ್ಲಿಕಾರ್ಜುನ ಪ್ರೌಢಶಾಲೆಯಿಂದ ಅಟಲ್‌ಜೀ ಕೇಂದ್ರದ ವರೆಗಿನ ರಸ್ತೆ ಹಾಳಾಗಿದ್ದು, ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಮಳೆಗಾಲದಲ್ಲಿ ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಪಪಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆಯಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ರಾಜೇಶ ಬುರ್ಲಿ ಭೇಟಿ ನೀಡಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯ ಅಧಿಕಾರಿಯನ್ನು ಸ್ಥಳಕ್ಕೆ ಕರೆಯಿಸಿ, ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿದರು. ಕ್ರಮದ ಭರವಸೆ ಸಿಕ್ಕ ಬಳಿಕ ನಿವಾಸಿಗಳು ಪ್ರತಿಭಟನೆ ಹಿಂಪಡೆದರು.

ರಾಹುಲ ಕಟಗೇರಿ, ಭರತ ಮೋಳೆ, ಅರುಣ ಜೋಶಿ, ಎಂ.ಬಿ. ಉದಗಾಂವೆ, ಆಕಾಶ ಮಿಠಾರೆ, ಡಾ.ಪವನ ಮಾಲಗಾಂವೆ, ಈರಗೌಡ ಪಾಟೀಲ, ಪ್ರಕಾಶ ಐನಾಪುರೆ, ಸಾಜೀದ್ ಇನಾಮದಾರ, ಅಶ್ಪಕ್ ಮಕಾನಾದಾರ, ಅರುಣ ಖಾಡೆ, ಪ್ರಭಾಕರ ರೂಗೆ, ಅಶೋಕ ಮೋರೆ, ದೀಪಕ ಕರವ, ಸಚೀನ ಚಿಪ್ಪರಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net