ಮೂಲಸೌಲಭ್ಯ ಕಲ್ಪಿಸಲು ಪ್ರಯತ್ನ

18Aratal12
Published on

ಅರಟಾಳ: ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲೆಯನ್ನಾಗಿಸಿ ಉನ್ನತಿಕರಣಗೊಳಿಸಿ ಸರ್ಕಾರ ಆದೇಶ ನೀಡಿದ್ದು, ಗ್ರಾಮಸ್ಥರಿಗೆ ಮಾತು ಕೊಟ್ಟಂತೆ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಿಸುವ ಕೆಲಸ ಮಾಡಿದ್ದೇನೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಗ್ರಾಮದ ಲಕ್ಷ್ಮಣ ಸವದಿಯವರ ಗೃಹ ಕಚೇರಿಯಲ್ಲಿ ಗುರುವಾರ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಸರ್ಕಾರಿ ಪ್ರೌಢಶಾಲೆ ನಿರ್ಮಾಣದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದ್ದು, ಈ ಭಾಗದ ಜನರಿಗೆ ಅವಶ್ಯವಿರುವ ಸರ್ಕಾರಿ ಸೌಲಭ್ಯ ದೊರೆಯುವಂತೆ ಪ್ರಯತ್ನಿಸುತ್ತೇನೆ ಎಂದರು.

ತಾಪಂ ಮಾಜಿ ಸದಸ್ಯ ಶಿವಪ್ಪ ಹಟ್ಟಿ ಮಾತನಾಡಿದರು. ಪಿಕೆಪಿಎಸ್ ಅಧ್ಯಕ್ಷ ಮಲ್ಲಪ್ಪ ಪೂಜಾರಿ, ಈಶ್ವರಲಿಂಗ ಕಲಘಟಗಿ, ಶ್ರೀಶೈಲ ಜಂಬಗಿ, ಹನುಮಂತ ಹಟ್ಟಿ, ರಂಗನಗೌಡ ಜಂಬಗಿ, ವಿಠ್ಠಲ ಹಟ್ಟಿ, ಮಲ್ಲಿಕಾರ್ಜುನ ತೆಲಸಂಗ, ವಾಸನಗೌಡ ಜಂಬಗಿ, ಅಪ್ಪು ಕಲಮಡಿ, ರಮೇಶ ವಡ್ಡರ, ಪರಶು ಅರ್ಜುಣಗಿ, ಕಲ್ಮೇಶ ತೆಲಸಂಗ, ಭೀಮಪ್ಪ ಹಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net