ವಾರ್ಡ್‌ಗಳಲ್ಲಿ ನೀರಿನ ಸೌಲಭ್ಯ ಕಲ್ಪಿಸಿ

Untitled design
ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ರಡ್ಡಿ ರಾಯನಗೌಡಗೆ ದಸಂಸ ಮುಖಂಡರು ಮನವಿ ಸಲ್ಲಿಸಿದರು. ಸಂಘದ ತಾಲೂಕು ಸಂಚಾಲಕ ಅಕ್ರಂಪಾಶಾ, ಹುಸೇನಪ್ಪ ತರಕಾರಿ, ನಿರುಪಾದಿ, ಹನುಮೇಶ, ಮುದಿ ಹುನಕುಂಟಿ, ಬಾಬಾಜಾನಿ, ದಾದಾಪೀರ, ಸುರೇಶ ಹಿರೇಮಠ ಇದ್ದರು.
Published on

ಲಿಂಗಸುಗೂರು: ವಾರ್ಡ್‌ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮುಖಂಡರು ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ರಡ್ಡಿ ರಾಯನಗೌಡಗೆ ಬುಧವಾರ ಮನವಿ ಸಲ್ಲಿಸಿದರು.

ನೀರಿನ ಸಮಸ್ಯೆಯಿಂದ ಸಂಕಷ್ಟ

ಪುರಸಭೆ ವಾರ್ಡ್ 7ರಲ್ಲಿ ಕಲಬುರ್ಗಿ ರಸ್ತೆಯ ಆಶ್ರಯ ಕಾಲನಿ ಹಾಗೂ ವಾರ್ಡ್ 12 ರಲ್ಲಿ ಮುಕ್ತಿಧಾಮಕ್ಕೆ ಸಮೀಪದ ನೀರಿನ ಮೋಟಾರ್‌ಗಳು ಕೆಟ್ಟು ಹೋಗಿ ತುಕ್ಕು ಹಿಡಿದಿವೆ. ಹೀಗಾಗಿ ವಾರ್ಡ್‌ನ ನಿವಾಸಿಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಕೂಡಲೇ ಮೋಟಾರ್ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.

ಧಾರಾಕಾರ ಮಳೆಯಿಂದ ಆಶ್ರಯ ಕಾಲನಿಯ ರಸ್ತೆ ಹದಗೆಟ್ಟಿದ್ದು, ಕೂಡಲೇ ಮರಂ ಹಾಕಿಸಬೇಕು. ವಾರ್ಡ್ 14ರಲ್ಲಿ ಮೋಟಾರ್ ಪಂಪ್ ವ್ಯವಸ್ಥೆ ಕಲ್ಪಿಸಬೇಕು. ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ಕುಡಿಯುವ ನೀರು ಸರಬರಾಜು ಪೈಪ್‌ಲೈನ್ ಒಡೆದು ನೀರು ಪೋಲಾಗುತ್ತಿದೆ. ಶೀಘ್ರ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿದರು.

ಸಂಘದ ತಾಲೂಕು ಸಂಚಾಲಕ ಅಕ್ರಂಪಾಶಾ, ಹುಸೇನಪ್ಪ ತರಕಾರಿ, ನಿರುಪಾದಿ, ಹನುಮೇಶ, ಮುದಿ ಹುನಕುಂಟಿ, ಬಾಬಾಜಾನಿ, ದಾದಾಪೀರ, ಸುರೇಶ ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net