

ಬೆಳಗಾವಿ: ಮೂಲಸೌಕರ್ಯಗಳ ಅಭಿವೃದ್ಧಿದಾಗ ಆ ಪ್ರದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತದೆ. ಹೀಗಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಕಲ ರೀತಿಯ ಮೂಲಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಗ್ರಾಮೀಣ ಕ್ಷೇತ್ರದ ವಿವಿಧೆಡೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಮೂಲಸೌಲಭ್ಯಗಳು ಒಮ್ಮೆ ಒದಗಿಸಿದರೆ ಮುಗಿಯುವಂಥದ್ದಲ್ಲ. ರಸ್ತೆ, ಚರಂಡಿ ಸೇರಿ ಅಗತ್ಯ ಸೌಕರ್ಯಗಳನ್ನು ಆಗಾಗ ಕಲ್ಪಿಸಬೇಕಾಗುತ್ತದೆ. ಕ್ಷೇತ್ರದ ಯಾವುದೇ ಭಾಗದಲ್ಲಿ ಮೂಲಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.
ಹಲಗಾ ಗ್ರಾಮದ ಶಿವಾಜಿ ಗಲ್ಲಿ, ತಾನಾಜಿ ಗಲ್ಲಿ ರಸ್ತೆ ನಿರ್ಮಾಣ ಮತ್ತು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಿಂದ ಮಾಸ್ತಮರ್ಡಿ ಕ್ರಾಸ್‌ವರೆಗಿನ ರಸ್ತೆಯ ಡಾಂಬರಿಕರಣದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. 1108 ಸಿದ್ಧಸೇನ ಮಹಾರಾಜ, ಗಣಪತ ಮಾರಿಹಾಳ್ಕರ್, ಸಾಗರ ಕಾಮನಾಚೆ, ಮಹಾವೀರ ಪಾಟೀಲ, ಕಿರಣ ಹನಮಂತಾಚೆ, ರೂಪಾ ಸುತಾರ, ಕಲ್ಪನಾ ಹನಮಂತಾಚೆ, ಲಕ್ಷ್ಮೀ ಸಂತಾಜಿ, ರೇಖಾ ಚಿಕ್ಕಪರಪ್ಪ, ಮಂಜುನಾಥ ಕೋಲಕಾರ, ಸಂತೋಷ ಅಷ್ಟೇಕರ, ನಾಗೇಶ ಮಹಾರ, ಮಾರುತಿ ತಾನಸಿ, ಗೋಪಾಲ ಮರಕಟನಾಳ, ಪ್ರಕಾಶ ಪಾಟೀಲ, ಮನೋಹರ್ ಬಾಂಡಗಿ, ಕೇಶವ ಚೌಗುಲೆ, ರಾಮಾ ಕಾಕತ್ಕರ ಇತರರಿದ್ದರು.