ಸರ್ಕಾರಿ ಶಾಲಾ-ಕಾಲೇಜ್​ಗಳಿಗೆ ಮೂಲಸೌಲಭ್ಯ

Infrastructure for government schools and colleges
Published on

ಲಕ್ಷ್ಮೇಶ್ವರ: ಕ್ಷೇತ್ರದಲ್ಲಿ ಅನೇಕ ಸರ್ಕಾರಿ ಶಾಲಾ-ಕಾಲೇಜ್​ಗಳಲ್ಲಿ ಅವಶ್ಯವಿರುವ ಮೂಲಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅನೇಕ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಸೌಲಭ್ಯ ಪಡೆದುಕೊಂಡು ಶೈಕ್ಷಣಿಕ ಸಾಧನೆ ಮಾಡಬೇಕು ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ತೋಟಪ್ಪ ಮಾನ್ವಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಮೂಲಸೌಲಭ್ಯಗಳ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸರ್ಕಾರಗಳು ಶಿಕ್ಷಣ ಕ್ಷೇತ್ರದಲ್ಲಿ ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯಬೇಕು ಎನ್ನುವ ಉದ್ದೇಶದಿಂದ ಹಲವು ಸೌಲಭ್ಯ ಒದಗಿಸುತ್ತಿವೆ. ಸೌಲಭ್ಯ ಬಳಸಿಕೊಂಡು ಸಾಧನೆ ಮಾಡುವ ಛಲ ವಿದ್ಯಾರ್ಥಿಗಳಲ್ಲಿ ಬರಬೇಕು. ವಿದ್ಯಾರ್ಥಿ ಜೀವನ ಹೂವಿನ ಹಾಸಿಗೆಯೆಲ್ಲ, ಕಠಿಣ ಪರಿಶ್ರಮ ಹಾಗೂ ನಿರಂತರ ಅಧ್ಯಯನದಿಂದ ಮಾತ್ರ ಯಶಸ್ಸು ಸಿಗುತ್ತದೆ ಎಂದರು.

ವಿದ್ಯಾರ್ಥಿಗಳು ಆಟ, ಪಾಠದ ಜತೆಯಲ್ಲಿ ಆರೋಗ್ಯ ಹಾಗೂ ಸ್ವಚ್ಛತೆಯ ಕಡೆಗೆ ಗಮನ ಕೊಡಬೇಕು. ಕ್ಷೇತ್ರದ ಖಾಸಗಿ, ಸರ್ಕಾರಿ ಎಲ್ಲ ಶಾಲಾ ಕಾಲೇಜ್​ಗಳಿಗೆ ಮೂಲಸೌಲಭ್ಯಗಳು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಸುನೀಲ ಮಹಾಂತಶೆಟ್ಟರ, ನವೀನ ಬೆಳ್ಳಟ್ಟಿ, ಬಸವರಾಜ ಚಕ್ರಸಾಲಿ, ಗಿರೀಶ ಚೌರಡ್ಡಿ, ಬಸವರಾಜ ಶೆಟ್ಟರ, ಮಂಜುನಾಥ ಗೊರವರ, ಶಕ್ತಿ ಕತ್ತಿ, ಅನಿಲ ಮುಳುಗುಂದ, ನೀಲಪ್ಪ ಹತ್ತಿ, ಸಂತೋಷ ಜಾವೂರ, ತೊಂಟೆಶ ಮಾನ್ವಿ, ವಿಜಯ ಮೆಕ್ಕಿ, ಮೈನು, ಗದಗ ಜಿಇ ಅನಿಲ ಚೌರಡ್ಡಿ,

ಪ್ರಾಚಾರ್ಯ ಮಂಜುನಾಥ ಕೊಕ್ಕರಗುಂದಿ, ಉಪನ್ಯಾಸಕರಾದ ಬಿ.ಎನ್. ದೊಡ್ಡಮನಿ, ವಿನಾಯಕ ವೇತಾಳ, ಎನ್.ಒ ಸಾತಪುತೆ, ಕಾಲೇಜ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net