ಸರ್ವರ ಸಹಕಾರದಿಂದ ಗ್ರಾಮಗಳಲ್ಲಿ ಉತ್ತಮ ಆಡಳಿತ

Hatti GP President Voice President Select
ಹಟ್ಟಿ ಗ್ರಾಪಂನಲ್ಲಿ ನೂತನ ಗ್ರಾಪಂ ಅಧ್ಯಕ್ಷೆ ಪರ್ವಿನಬಾನು, ಉಪಾಧ್ಯಕ್ಷ ನಿಂಗನಗೌಡ ಪದಗ್ರಹಣ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
Published on

ಅಳವಂಡಿ: ಗ್ರಾಮಗಳ ಅಭಿವೃದ್ಧಿಯಾಗಬೇಕಾದರೆ ಸರ್ವರ ಸಹಕಾರ ಅಗತ್ಯ. ಎಲ್ಲ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಗ್ರಾಪಂ ನೂತನ ಅಧ್ಯಕ್ಷೆ ಪರ್ವಿನಬಾನು ತಿಳಿಸಿದರು.

ಸಮೀಪದ ಹಟ್ಟಿ ಗ್ರಾಪಂನಲ್ಲಿ ಸೋಮವಾರ ಎರಡನೇ ಅವಧಿಯ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಗ್ರಾಮಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಜತೆಗೆ ನರೇಗಾ ಯೋಜನೆಯ ಸಮರ್ಪಕ ಜಾರಿ, ಬೀದಿ ದೀಪ, ಕುಡಿಯುವ ನೀರಿನ ಸಮರ್ಪಕ ಪೂರೈಕೆ ಬಗ್ಗೆ ಕ್ರಮ ಕೈಕೊಳ್ಳಲಾಗುವುದು ಎಂದರು.

ಉಪಾಧ್ಯಕ್ಷ ನಿಂಗನಗೌಡ, ಪಿಡಿಒ ರತ್ನವ್ವ ಕಂಬಳಿ, ಕಾರ್ಯದರ್ಶಿ ಮಂಜುನಾಥಯ್ಯ, ಪ್ರಮುಖರಾದ ಭರಮಪ್ಪ ನಗರ, ಹೊನ್ನಪ್ಪಗೌಡ, ಗ್ರಾಪಂ ಸದಸ್ಯರಾದ ತೋಟಪ್ಪ ಶಿಂಟ್ರ, ಹಾಲಮ್ಮ ನಗರ, ಶಿವವ್ವ ಪೂಜಾರ, ಮಾತಂಗವ್ವ ಹರಿಜನ, ಮಹೇಶ ಡಂಬಳ, ಕೆಂಚವ್ವ ಹರಿಜನ, ಜಂಗ್ಲಿಸಾಬ್ ಒಂಟಿ, ಸಾವಿತ್ರವ್ವ ಚಿಲವಾಡಗಿ, ಲಕ್ಷ್ಮವ್ವ ಇಟಗಿ, ಕೊಟ್ರವ್ವ ಡಾವು, ಪ್ರೇಮಾ ಪೂಜಾರ, ಸಿಬ್ಬಂದಿ ಲಕ್ಷ್ಮಣ, ನಾಗಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net