

ಚಿತ್ರದುರ್ಗ: ನಿವೇಶನ, ಮನೆ ಮಂಜೂರು ಸೇರಿ ನಾನಾ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಚಳ್ಳಕೆರೆ ತಾಲೂಕು ಮೀರಾಸಾಬಿಹಳ್ಳಿಯ ಮಹಿಳೆಯರು ಶುಕ್ರವಾರ, ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಡಿಸಿಗೆ ಮನವಿ ಸಲ್ಲಿಸಿದರು.
ವಸತಿ ಸೌಕರ್ಯ ಕೋರಿ ಮೀರಾಸಾಬಿಹಳ್ಳಿ ಗ್ರಾಪಂ, ಚಳ್ಳಕೆರೆ ತಹಸೀಲ್ದಾರ್‌ಗೆ ಅನೇಕ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ವಸತಿ, ವಿದ್ಯುತ್, ಕುಡಿವ ನೀರು ಒದಗಿಸುವಂತೆ ಶಾಸಕರಿಗೂ ಮನವಿ ಮಾಡಲಾಗಿದೆ. ಆದರೆ, ಪ್ರಯೋಜನವಾಗಿಲ್ಲ ಎಂದರು.
ಬಸವಣ್ಣ ಮೂಕಬಸಪ್ಪ ಟ್ರಸ್ಟ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಟ್ರಸ್ಟ್ ಅಧ್ಯಕ್ಷ ಚಿನ್ನಮಲ್ಲಯ್ಯ, ಉಪಾಧ್ಯಕ್ಷ ಮಲ್ಲೇಶ್, ಕಾರ್ಯದರ್ಶಿ ಪರ್ವತಯ್ಯ, ಖಜಾಂಚಿ ಶಾಲಿನಿ, ನವೀನ್, ಶಾರದಾ, ವಿಮಲಾಕ್ಷಿ, ಆರ್. ರೂಪಾ, ವಿ.ನಾಗವೇಣಿ, ಸುಮಂಗಳಮ್ಮ, ಎನ್. ನೀಲಾ, ಕೆ. ಕರಿಯಮ್ಮ, ವೀಣಾ, ರೇವತಿ, ಮಾರಕ್ಕ, ತಿಮ್ಮಕ್ಕ ಇತರರಿದ್ದರು.