

ಹೊಸಪೇಟೆ: ಇನ್ಫೋಸಿಸ್ ಫೌಂಢೇಷನ್ ಮುಖ್ಯಸ್ಥೆ ಸುಧಾಮೂರ್ತಿ ಭಾರತದ ರಾಷಟ್ರೆಪತಿ ಆಗಲಿ ಎಂದು ಹಾರೈಸಿ ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘ ಕಾರ್ಯಕರ್ತರು ಹಂಪಿಯ ಪಂಪಾ ವಿರೂಪಾಕ್ಷ ದೇವರಿಗೆ ಶುಕ್ರವಾರ ರುದ್ರಾಭಿಷೆೇಕ ಮತ್ತು ಎಳನೀರು ಅಭಿಷೇಕ ಪೂಜೆ ಸಲ್ಲಿಸಿದರು.
ಸುಧಾ ಮೂರ್ತಿ ಕರೊನಾ ಅಪ್ಪಳಿಸಿದ್ದ ಸಂದರ್ಬದಲ್ಲಿ ರಾಜ್ಯದ ಎಲ್ಲ ಪ್ರವಾಸಿ ತಾಣಗಳ ಗೈಡ್‌ಗಳಿಗೆ ತಲಾ ರೂ.10,000ದಂತೆ ಎರಡು ಬಾರಿ ಆರ್ಥಿಕ ಸಹಾಯ ಮಾಡಿದ್ದರು. ಇಂತಹ ಹಲವು ಸಮಾಜಮುಖಿ ಕೆಲಸಗಳನ್ನು ಅವರು ಮಾಡುತ್ತಲೇ ಇದ್ದಾರೆ. ಆದ್ದರಿಂದ ಇಂಥವರು ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕೆಕ ಆಯ್ಕೆಯಾಗಬೇಕು. ಆದ್ದರಿಂದ ಈ ಪೂಜೆ ಮಾಡಿಸಲಾಗಿದೆ. ಅಲ್ಲದೇ ಈ ವಿಷಯಕ್ಕೆ ಸಂಬಂಧಿಸಿದಂತೆ ಅಭಿಯಾನ ಶುರುವಾಗಿದ್ದು, ಇದರ ಮುಂದುವರಿದ ಭಾಗವಾಗಿ ಪೂಜೆ, ಅಭಿಷೇಕಗಳು ನಡೆಯುತ್ತಿವೆ ಎಂದು ಗೈಡ್‌ಗಳಾದ ವಿರೂಪಾಕ್ಷಿ ವಿ.ಹಂಪಿ, ಹುಲಗಪ್ಪ, ಮಲ್ಲಿಕಾರ್ಜುನ ಸ್ವಾಮಿ, ಮಂಜುನಾಥ್ ಗೌಡ, ಎಸ್ ದೇವರಾಜ್, ವಿ.ಗೋಪಾಲ, ಹುಸೇನ್ ಇತರರು ತಿಳಿಸಿದ್ದಾರೆ.