ಕೆಆರ್‌ಎಸ್ ಡ್ಯಾಂ ನೋಡಿ ಖುಷಿ ಪಟ್ಟ ಇನ್ಫೋಸಿಸ್ ಸಂಸ್ಥಾಪಕರು

Krs
Published on

ಕೆಆರ್‌ಎಸ್: ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆ ಗರಿಷ್ಠ ಮಟ್ಟ 124.80 ತುಂಬಿದ ಹಿನ್ನಲೆಯಲ್ಲಿ ಬುಧವಾರ ಇನ್ಫೋಸಿಸ್ ಸಂಸ್ಥಾಪಕ ಅಧ್ಯಕ್ಷ ನಾರಯಣ ಮೂರ್ತಿ ಮತ್ತು ಸುಧಾಮೂರ್ತಿ ಭೇಟಿ ನೀಡಿ ವೀಕ್ಷಣೆ ಮಾಡಿ ಸಂತಸ ವ್ಯಕ್ತಪಡಿಸಿದರು. ಕಾವೇರಿ ಮಾತೆ ಆರ್ಶೀವಾದದಿಂದ ಅಣೆಕಟ್ಟೆ ಭರ್ತಿಯಾಗಿದ್ದು, ರೈತರು ಮತ್ತು ಜನತೆ ಸಂತೋಷವಾಗಿರ ಬೇಕೆಂಬುದೆ ನಮ್ಮ ಆಶಯ ಎಂದರು.
ಅಣೆಕಟ್ಟೆಯಲ್ಲಿನ ನೀರಿನ ಸಂಗ್ರಹ ಮತ್ತು ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಕಾವೇರಿ ನೀರಾವರಿ ನಿಗಮದ ಸಹಾಯಕ ಅಭಿಯಂತರ ಕಿಶೋರ್ ಕುಮಾರ್ ರವರಿಂದ ಪಡೆದರು. ಇದೇ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net