ಇನ್ಫೋಸಿಸ್ ಫೌಂಡೇಷನ್ ಕೊಡುಗೆ ಅಪಾರ - ಗೋವಿಂದ ಕೊಪ್ಪದ

02
Published on

ಕುಲಗೋಡ: ಇನ್ಫೋಸಿಸ್ ಫೌಂಡೇಷನ್ ದೇಶಕ್ಕಾಗಿ ನೀಡಿರುವ ಕೊಡುಗೆ ಅಪಾರ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದ ಕೊಪ್ಪದ ಹೇಳಿದ್ದಾರೆ. ಗ್ರಾಮದ ನಾಯಕ ಸ್ಟೂಡೆಂಟ್ ಫೆಡರೇಷನ್ ಪ್ರೌಢಶಾಲೆಯಲ್ಲಿ ಬುಧವಾರ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಮೂಡಲಗಿ ವಲಯದ ಪ್ರೌಢ ಶಾಲೆಗಳಿಗೆ ಕೊಡಮಾಡಿದ ಉಚಿತ ಕಂಪ್ಯೂಟರ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅನುದಾನಿತ ಶಾಲೆಗಳಾದ ಎನ್.ಎಸ್.ಎಫ್. ಪ್ರೌಢಶಾಲೆ, ಕೇಳಕರ ಪ್ರೌಢಶಾಲೆ ಕುಲಗೋಡ, ಮಹಾಲಕ್ಷ್ಮೀ ಪ್ರೌಢಶಾಲೆ ಮಸಗುಪ್ಪಿ, ಜಿಎನ್‌ಎಸ್ ಪ್ರೌಢಶಾಲೆ ಯಾದವಾಡ, ಸರ್ಕಾರಿ ಪ್ರೌಢ ಶಾಲೆಗಳಾದ ಹೊನಕುಪ್ಪಿ, ಕೊಪದಟ್ಟಿ, ಹುಣಶ್ಯಾಳ, ಸುಣಧೋಳಿ, ಅವರಾದಿ ಪ್ರೌಢಶಾಲೆಗಳಿಗೆ ಒಂದರಂತೆ 10 ಕಂಪ್ಯೂಟರ್ ನೀಡಲಾಯಿತು.

ಜಿಪಂ ಸದಸ್ಯ ಕೊಪ್ಪದ ಶಾಲೆಗಳಿಗೆ ನೀರಿನ ಕ್ಯಾನ್ ನೀಡಿದರು. ನಿವೃತ್ತ ಜಿಆರ್‌ಬಿಸಿ ಎಸ್.ಜಂಗಲ್, ಬಸವರಾಜ ಟಿ., ಸತೀಶ ಬಿ.ಎಸ್, ಎಲ್.ಎಂ.ಬಡಕಲ್ಲ, ಆರ್.ಎಂ.ಮಹಾಲಿಂಗಪುರ, ಸುರೇಶ ತಳವಾರ, ಹನುಮಂತ ಬೆಳಗಲಿ, ವಿಜಯ ಜಡ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net