

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಇನ್ಫೋಸಿಸ್ ಎದುರು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮತ್ತು ಇನ್ಫೋಸಿಸ್ ಫೌಂಡೇಷನ್ ಸಿಎಸ್ಆರ್ ನಿಧಿ ಅಡಿ ನಿರ್ಮಿಸಲಾದ ಎಚ್ ಡಿಎಂಸಿ ಐಟಿ ಕಾರಿಡಾರ್ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಾಯಿತು.
ಇನ್ಫೋಸಿಸ್ ಫೌಂಡೇಷನ್ ಉಪಾಧ್ಯಕ್ಷೆ ಮನೀಷಾ ಸಾಬೂ ಅವರು ಬಸ್ ನಿಲ್ದಾಣವನ್ನು ಉದ್ಘಾಟಿಸಿದರು. ಈ ಪ್ರಯತ್ನವು ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವುದರ ಜೊತೆಗೆ ನಗರದ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಈ ಬಸ್ ನಿಲ್ದಾಣವನ್ನು ರೋಟರಿ ಕ್ಲಬ್ ನಿರ್ವಹಣೆ ಮಾಡಲಿದೆ ಎಂದು ತಿಳಿಸಲಾಯಿತು.
ಅಧ್ಯಕ್ಷ ಕಿರಣ ಹೆಬಸೂರ, ಕಾರ್ಯದರ್ಶಿ ರಿಷಿ ತಿವಾರಿ ಮತ್ತು ಸಮುದಾಯ ಸೇವಾ ನಿರ್ದೇಶಕ ಯೋಗೇಶ್ ಕರಂದಿಕರ್, ರಿಯಾಜ ಬಸರಿ, ಪ್ರಶಾಂತ ಹೆಬಸೂರ, ಅರವಿಂದ ಕುಬಸದ, ಎ.ವಿ. ಸಂಕನೂರ, ಜಿತೇಶ ಪಾಂಚಾಲ, ಬಾಪು ಬಿರಾದಾರ, ಮುರಳಿ ಭಿಲ್ಲೆ, ಮೋಹಿತ ದಂಡ, ವಿದ್ಯಾಧರ ಎಲಗುಚ್ಚಿ, ಮಂಜುನಾಥ ಹೊಂಬಳ, ಸಾರ್ವಜನಿಕರು ಉಪಸ್ಥಿತರಿದ್ದರು.