ಸಹಕಾರಿ ಸಿಬ್ಬಂದಿಗೆ ತರಬೇತಿ ಅಗತ್ಯ: ಅಶೋಕ್ ಕುಮಾರ್ ಶೆಟ್ಟಿ ಹೇಳಿಕೆ

imformation
ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಕೊಕ್ಕರ್ಣೆ ಸಿಬ್ಬಂದಿಗೆ ಮಾಹಿತಿ ಮತ್ತು ತರಬೇತಿ ಕಾರ್ಯಾಗಾರವನ್ನು ಕೋಟ ವ್ಯವಸಾಯ ಸೇವಾ ಸಹಕಾರಿ ಸಂಘ ನಿರ್ದೇಶಕ ತಿಮ್ಮ ಪೂಜಾರಿ ಉದ್ಘಾಟಿಸಿದರು
Published on

ಕೊಕ್ಕರ್ಣೆ: ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಹಾಗೂ ಪ್ರಸ್ತುತ ಸಹಕಾರಿ ಕ್ಷೇತ್ರದಲ್ಲಿರುವ ಪೈಪೋಟಿ ನಿಭಾಯಿಸಲು ಸಿಬ್ಬಂದಿಗೆ ನಿರಂತರ ತರಬೇತಿ ಅಗತ್ಯ ಎಂದು ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಕೊಕ್ಕರ್ಣೆ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಕರ್ಜೆ ಹೇಳಿದರು.

ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಕೊಕ್ಕರ್ಣೆ ಸಿಬ್ಬಂದಿಗೆ ಮಾಹಿತಿ ಮತ್ತು ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋಟ ವ್ಯವಸಾಯ ಸೇವಾ ಸಹಕಾರಿ ಸಂಘ ನಿರ್ದೇಶಕ ತಿಮ್ಮ ಪೂಜಾರಿ ಉದ್ಘಾಟಿಸಿ, ಸಹಕಾರ ಚಳವಳಿಯಿಂದ ಹಿಡಿದು ಪ್ರಸ್ತುತ ಸಹಕಾರ ಕೇತ್ರದಲ್ಲಿರುವ ಪೈಪೋಟಿ ಹಾಗೂ ಬದಲಾದ ವ್ಯವಸ್ಥೆ ಕುರಿತು ಮಾತನಾಡಿದರು.

ಕುಂದಾಪುರ ಉಪವಿಭಾಗ ಸಹಕಾರ ಇಲಾಖೆ ನಿವೃತ್ತ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ., ಕೆಐಸಿಎಂ ಮೂಡುಬಿದರೆ ಉಪನ್ಯಾಸಕಿ ಬಿಂದು ಬಿ.ನಾಯರ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಶ್ರೀಧರ್ ಪಿ.ಎಸ್.ವಕೀಲರು ಕುಂದಾಪುರ ಮಾತನಾಡಿದರು.

ಸಂಘ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ವಂಡಾರು ನಿರ್ದೇಶಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಇತ್ತೀಚೆಗೆ ಸೇವೆಯಿಂದ ನಿವೃತ್ತಿ ಹೊಂದಿದ ನಿವೃತ್ತ ಸಹಾಯಕ ನಿಬಂಧಕ ಸಹಕಾರ ಇಲಾಖೆ ಕುಂದಾಪುರ ಅರುಣ್ ಕುಮಾರ್ ಎಸ್.ವಿ.ಅವರನ್ನು ಗೌರವಿಸಲಾಯಿತು.

ಸಂಘ ಸಿಬ್ಬಂದಿ ಶರತ್ ಹಿಲಿಯಾಣ ನಿರೂಪಿಸಿ, ಸಂಘದ ಪ್ರಭಾರ ಆಡಳಿತ ನಿರ್ದೇಶಕ ಅಭಿಷೇಕ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದು, ಹಿಲಿಯಾಣ ಶಾಖಾ ವ್ಯವಸ್ಥಾಪಕ ಶಂಕರ್ ಪೂಜಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net