ಜನರಿಗೆ ಯೋಜನೆಗಳ ತಲುಪಿಸಲು ಯತ್ನ : ಬಂಟ್ವಾಳ ಪುರಸಭೆ ಅಧ್ಯಕ್ಷ ವಾಸು ಹೇಳಿಕೆ

New Project (5)
Published on

ಬಂಟ್ವಾಳ: ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬಂಟ್ವಾಳ ಪುರಸಭೆ ಕಾರ್ಯೋನ್ಮುಖವಾಗಿದ್ದು, ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಬಂಟ್ವಾಳ ಪುರಸಭೆ ಅಧ್ಯಕ್ಷ ವಾಸು ಪೂಜಾರಿ ಹೇಳಿದರು.

ಸ್ವನಿಧಿ ಸಮೃದ್ಧಿ ಯೋಜನೆ ಅನ್ವಯ ಬೀದಿಬದಿ ವ್ಯಾಪಾರಿಗಳು ಹಾಗು ಸ್ವ ಸಹಾಯ ಸಂಘದ ಸದಸ್ಯರಿಗೆ ಬಂಟ್ವಾಳ ಪುರಸಭೆಯ ವತಿಯಿಂದ ಆಯೋಜಿಸಿದ್ದ ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಮಾದಕ ವ್ಯಸನಗಳ ಬಗ್ಗೆ ನಡೆದ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ನಗರ ಅಭಿಯಾನ ವ್ಯವಸ್ಥಾಪಕಿ ಐರಿನ್ ರೆಬೆಲ್ಲೋ ಮಾತನಾಡಿದರು. ಮನೋ ವೈದ್ಯಕೀಯ ಸಾಮಾಜಿಕ ಕಾರ್ಯಕರ್ತೆ ದಿವ್ಯಾ ಎನ್. ಆರೋಗ್ಯ ಮಾಹಿತಿ ನೀಡಿದರು. ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ಸತೀಶ್ ಎಡ್ವಿನ್ ಸಾಮಾಜಿಕ ಭಧ್ರತಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಎಸ್‌ಬಿಐ ಬ್ಯಾಂಕ್ ಸಿಬ್ಬಂದಿ ಜೀವನ್, ಪುರಸಭಾ ಸದಸ್ಯರಾದ ಪುರುಷೋತ್ತಮ, ಮೀನಾಕ್ಷಿ, ನಾಮ ನಿರ್ದೇಶಿತ ಸದಸ್ಯ ಜಗದೀಶ್ ಕುಂದರ್, ಲಯನ್ಸ್ ಕ್ಲಬ್ ಅಧ್ಯಕ್ಷ ರೋಹಿತಾಶ್ವ, ಪಟ್ಟಣ ಮಾರಾಟ ಸಮಿತಿ ಸದಸ್ಯ ಇಕ್ಬಾಲ್, ಉಮಾವತಿ ಉಪಸ್ಥಿತರಿದ್ದರು. ಗೀತಾ ಸ್ವಾಗತಿಸಿದರು. ಸಂಧ್ಯಾ ವಂದಿಸಿದರು. ಮಂಗಳ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net